Header Ads
Header Ads
Breaking News

ವಿಂಬಲ್ಡನ್ ಟೆನ್ನಿಸ್ ಲಂಡನ್, ಫೆಡರರ್, ಸಿಲಿಕ್ ಪುರುಷರ ಫೈನಲ್

ವಿಂಬಲ್ಡನ್ ಟೆನಿಸ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿರುವ ಮರಿನ್ ಸಿಲಿಕ್ ಮತ್ತು ದಾಖಲೆ ಗೆಲುವಿನ ಹಿರಿಯ ರೋಜರ್ ಫೆಡರರ್ ನಡುವೆ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ.
ಕ್ರೊವೇಷ್ಯಾದ ಆಟಗಾರ ಮರಿನ್ ಸಿಲಿಕ್ ಮೊದಲ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ ಸಂಭ್ರಮ ಆಚರಿಸಿದರು. ೧೧ನೇ ಸೆಮಿಫೈನಲ್ ಪ್ರಯತ್ನದಲ್ಲಿ ಸಿಲಿಕ್ ೬-೭, ೬-೪, ೭-೬, ೭-೫ರಲ್ಲಿ ಅಮೆರಿಕದ ಸ್ಯಾಮ್ ಕ್ವೆರಿ ಅವರನ್ನು ಮಣಿಸಿದರು. ಏಳನೇ ಶ್ರೇಯಾಂಕದ ಕ್ರೊವೇಷ್ಯಾದ ಆಟಗಾರ ೨೦೧೪ರಲ್ಲಿ ಅಮೆರಿಕ ಓಪನ್ ಗೆದ್ದುಕೊಂಡಿದ್ದರು. ನನಗೆ ಈಗಲೂ ನಂಬಲು ಆಗುತ್ತಿಲ್ಲ. ಸೆಮಿಫೈನಲ್ನಲ್ಲಿ ನಾನು ಉತ್ತಮವಾಗಿ ಆಡಲು ಸಾಧ್ಯವಾಗಿದ್ದಕ್ಕೆ ಅತೀವ ಸಂತಸವಾಗಿದೆ ಎಂದು ೨೮ ವರ್ಷದ ಆಟಗಾರ ಸಿಲಿಕ್ ಹೇಳಿದ್ದಾರೆ. ಮೊದಲ ಸೆಟ್ನಲ್ಲಿ ಸ್ಯಾಮ್ ಅಮೋಘವಾಗಿ ಆಡಿದರು. ಆದರೆ ಬಳಿಕ ನಾನು ಎಂದಿನ ಲಯಕ್ಕೆ ಮರಳಿದೆ. ಗೆಲ್ಲುವ ಭರವಸೆ ಇತ್ತು. ಇದರಿಂದಲೇ ಜಯ ಗಳಿಸಲು ಸಾಧ್ಯವಾಯಿತು ಎಂದು ಸಿಲಿಕ್ ಹೇಳಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ ೨೮ನೇ ಸ್ಥಾನದಲ್ಲಿರುವ ಕ್ವೆರಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅಗ್ರಗಣ್ಯ?ಆಟಗಾರ ಆ್ಯಂಡಿ ಮರ್ರೆ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪುವ ವಿಶ್ವಾಸ ಮೂಡಿಸಿದ್ದರು. ಆದರೆ ಸಿಲಿಕ್ ೨೫ ಏಸ್ಗಳನ್ನು ಸಿಡಿಸುವ ಮೂಲಕ ಪಂದ್ಯ ತಮ್ಮದಾಗಿಸಿಕೊಂಡರು.
ಫೈನಲ್ ತಲುಪಿದ ಕ್ರೊವೇಷ್ಯಾದ ಎರಡನೇ ಆಟಗಾರ ಎಂಬ ಶ್ರೇಯ ಸಿಲಿಕ್ ಅವರಿಗೆ ಸಂದಿದೆ. ಗೊರ್ವನ್ ಇವಾನಿಸೆವಿಚ್ ಈ ಮೊದಲು ಇಲ್ಲಿ ಫೈನಲ್ ಪಂದ್ಯ ಆಡಿದ್ದರು. ಇನ್ನೊಂದು ಸೆಮಿ ಫೈನಲ್‌ನಲ್ಲಿ ಫೆಡರರ್ ಅವರು ಬರ್ಡೆಕ್‌ರನ್ನು ಸೋಲಿಸಿ ಫೈನಲ್ ಹೊಕ್ಕರು.

Related posts

Leave a Reply