Header Ads
Header Ads
Breaking News

ವಿಕಲಚೇತನರಿಗೆ ಗುರುತಿನ ಚೀಟಿ, ಸಮವಸ್ತ್ರ ವಿತರಣೆ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆರಿದರೆ ಗೌರವ ಧನ ಹೆಚ್ಚಳ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿಕೆ

ವಿಕಲಚೇತನರ ಗೌರವಧನವನ್ನು ಈ ಬಾರಿಯ ಬಜೆಟ್‌ನಲ್ಲಿ ಸ್ವಲ್ಪ ಮಟ್ಟಿನಲ್ಲಿ ಏರಿಕೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ವಿಕಲಚೇತನರ ಗೌರವ ಧನವನ್ನು ಮತ್ತಷ್ಟೂ ಹೆಚ್ಚಿಸುವ ಭರವಸೆ ನೀಡಿದ್ದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ. ಹೇಳಿದರು.ಅವರು, ಶ್ರೀ ಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ಲಯನೆಸ್ ಕ್ಲಬ್ ವತಿಯಿಂದ ಗ್ರಾಮೀಣ ವಿಕಲಚೇತನ ಪುನರ್ ವಸತಿ ಕಾರ್ಯಕರ್ತರಿಗೆ ಗುರುತಿನ ಚೀಟಿ ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದರು.
ನಮ್ಮ ಆಡಳಿತಕ್ಕೆ ಇನ್ನೇನು ಕೇವಲ 10-15 ದಿನಗಳು ಬಾಕಿ ಉಳಿದಿದ್ದು, ಸದ್ಯದಲ್ಲಿ ವಿಕಲಚೇತನರಿಗೆ ಸವಲತ್ತುಗಳನ್ನು ಒದಗಿಸಲು ಸಾಧ್ಯವಿಲ್ಲ. ಮುಂದಿನ ಬಾರಿ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆಯುವಲ್ಲಿ ವಿಕಲಚೇತನರು ಕೂಗುವ ಸಂದರ್ಭದಲ್ಲಿ ಕೂಗು ಗಟ್ಟಿಯಾಗಬೇಕು. ಆಗ ಖಂಡಿತಾ ನಿಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಹೇಳಿದರು.ವಿಕಲಚೇತನರ ಇಲಾಖೆ ಅಧಿಕಾರಿ ಶಿವಪ್ಪ ರಾಥೋಡ್ ವಿಕಲಚೇತನರಿಗೆ ಸರಕಾರದಿಂದ ಸಿಗುವಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಸುಳ್ಳು ಪ್ರಮಾಣ ಪತ್ರ ನೀಡಿ ವಿಕಲ ಚೇತನರು ಸರಕಾರದ ಬೊಕ್ಕಸವನ್ನು ಕೊಳ್ಳೆ ಹೊಡೆಯುವಂತಾಗಬಾರದು. ಏನಿದ್ದರೂ ನೈಜ ಫಲಾನುಭವಿಗಳಿಗೆ ಸರಕಾರದಿಂದ ಸಿಗುವ ಸವಲತ್ತುಗಳು ನೇರ ಸಿಗುವಂತಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಸಹಾಯಕರ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಾಂತಿ ಹೆಗ್ಡೆ, ಲಯನೆಸ್ ಅಧ್ಯಕ್ಷೆ ವಾಣಿಕೃಷ್ಣ, ತಾಲೂಕು ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply