Header Ads
Header Ads
Breaking News

ವಿಕಲಚೇತನರ ಕಾರ್ಡ್ ನೋಂದಣಿ ಶಿಬಿರದಲ್ಲಿ ಅವ್ಯವಸ್ಥೆ:ಪರದಾಡಿದ ವಿಕಲಚೇತನರು

ಪುತ್ತೂರು : ವಿಕಲಚೇತನರ ಕಾರ್ಡ್ ಮಾಡುವ ಉದ್ದೇಶದಿಂದ ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ತಪಾಸಣಾ ಶಿಬಿರಕ್ಕೆ ಶುಕ್ರವಾರ ಆಗಮಿಸಿದ್ದ ವಿಕಲಚೇತನರು ಆಸ್ಪತ್ರೆಯಲ್ಲಿನ ಅಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ಪರದಾಡಿ ಸುಸ್ತಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಅಂಗವಿಕಲರ ಕಾರ್ಡ್ ಮಾಡುವ ಉದ್ದೇಶದಿಂದ ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ತಪಾಸಣಾ ಶಿಬಿರಕ್ಕೆ ಶುಕ್ರವಾರ ಆಗಮಿಸಿದ್ದ ಪುತ್ತೂರು ತಾಲೂಕು ವ್ಯಾಪ್ತಿಯ ಹಲವು ಮಂದಿ ಅಂಗವಿಕರು ಆಸ್ಪತ್ರೆಯಲ್ಲಿನ ಅಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ಬೆಳಗ್ಗಿನಿಂದ ಸಂಜೆ ತನಕ ಕಾದು ಪರದಾಡಿ ಸುಸ್ತಾದ ಘಟನೆ ನಡೆದಿದೆ. ಪುತ್ತೂರು ತಾಲ್ಲೂಕಿನ ಅಂಗವಿಕಲರಿಗೆ ಕಾರ್ಡ್ ನೀಡುವ ಉದ್ದೇಶದಿಂದ ಪ್ರತೀ ತಿಂಗಳ ಎರಡನೇ ಶುಕ್ರವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಸಿ ಅಂಗವೈಕಲ್ಯತೆಯ ಬಗ್ಗೆ ದೃಢಪತ್ರ ನೀಡಲಾಗುತ್ತಿತ್ತು. ಈ ಹಿಂದೆ ಅಂಗವಿಕರ ತಪಾಸಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದ್ದರೂ ಈ ಬಾರಿ ಉಳಿದ ರೋಗಿಗಳ ಜತೆ ಅಂಗವಿಕಲರನ್ನು ಕೂಡ ಸೇರಿಸಿ ತಪಾಸಣಾ ಕ್ರಮ ಅನುಸರಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಅಂಗವಿಕಲರನ್ನು ಉಳಿದ ರೋಗಿಗಳ ಜತೆ ಸೇರ್ಪಡೆಗೊಳಿಸಿ ತಪಾಸಣಾ ಕ್ರಮ ಅನುಸರಿಸಿದ ಕಾರಣ ನಡೆದಾಡಲು ಸಾಧ್ಯವಿಲ್ಲದ ಹಾಗೂ ಅಸಹಾಯಕ ಸ್ಥಿತಿಯಲ್ಲಿದ್ದ ಅಂಗವಿಕಲರು ಆಸ್ಪತ್ರೆಯ ವರಾಂಡದಲ್ಲೇ ಉಳಿದು ಗೋಳಿಡುವ ಪರಿಸ್ಥಿತಿ ನಿರ್ಮಾಣವಾಯಿತು. ನಾವು ಬೆಳಿಗ್ಗಿನ ವೇಳೆಯೇ ಆಸ್ಪತ್ರೆಗೆ ಬಂದಿದ್ದೇವೆ. ತಪಾಸಣೆ ನಡೆಸುವ ವೈದ್ಯರ ಕೊಠಡಿಯೊಳಗೆ ಉಳಿದ ರೋಗಿಗಳೇ ನುಗ್ಗುತ್ತಿರುವುದರಿಂದ ನಮಗೆ ಪ್ರವೇಶಿಸಲು ನಮಗೆ ಅವಕಾಶವೇ ಸಿಕ್ಕಿಲ್ಲ. ನಾವು ಕುಳಿತಲ್ಲಿಯೇ ಬಾಕಿಯಾಗಿದ್ದೇವೆ ಎಂದು ಕೆಲವು ಮಂದಿ ಅಂಗವಿಕಲರು ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಅಂಗವಿಕಲರ ಕಾರ್ಡ್ ಮಾಡುವ ಉದ್ದೇಶದಿಂದ ತಪಾಸಣೆಗಾಗಿ ಆಗಮಿಸಿದ್ದ ವೃದ್ದರು, ಮಹಿಳೆಯರು,ಮಕ್ಕಳ ಸಹಿತ ಅಸಹಾಯಕ ಸ್ಥಿತಿಯಲ್ಲಿದ್ದ ಅಂಗವಿಕಲರು ಆಸ್ಪತ್ರೆಯ ವರಾಂಡದಲ್ಲಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರ ಕೊಠಡಿಯ ಮುಂದೆ ಗೋಳಿಡುತ್ತಿದ್ದರೂ ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಯಾಗಲೀ ಈ ಅವ್ಯವಸ್ಥೆಯನ್ನು ಸರಿಪಡಿಸಿ, ಅಂಗವಿಕಲರಿಗೆ ನ್ಯಾಯ ಒದಗಿಸಲು ಮುಂದಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ನಮಗೆ ಟೋಕನ್ ವ್ಯವಸ್ಥೆಯನ್ನಾದರೂ ಮಾಡಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ, ನಾವು ಇಲ್ಲಿ ಒದ್ದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಂಗವಿಕಲರೊಬ್ಬರು ತಿಳಿಸಿದರು.
ಅಂಗವಿಕಲರಿಗೆ ಕಾರ್ಡು ನೀಡುವ ಉದ್ದೇಶದಿಂದ ಪ್ರತೀ ತಿಂಗಳ ಎರಡನೇ ಶುಕ್ರವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅಂಗವಿಕಲರ ತಪಾಸಣಾ ಶಿಬಿರವನ್ನು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರತ್ಯೇಕ ವ್ಯವಸ್ಥೆಯನ್ನು ಬಿಟ್ಟು ಉಳಿದ ರೋಗಿಗಳ ಜತೆ ಸೇರಿಸಿ ವೈದ್ಯರ ಕೊಠಡಿಯಲ್ಲೇ ನಡೆಸಿರುವುದರಿಂದ ಇಂತಹ ಸಮಸ್ಯೆ ಆಗಿದೆ ಎಂದು ಅಂಗ ಊನತೆಯ ಕುರಿತು ವೈದ್ಯರು ದೃಢ ಪತ್ರ ನೀಡಿದ ಬಳಿಕ ಅರ್ಜಿ ಫಾರಂ ತುಂಬುವ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಂಡದಲ್ಲಿದ್ದ ತಾಲೂಕು ಪ್ರತಿನಿಧಿ ನವೀನ್‌ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

Related posts

Leave a Reply