Header Ads
Header Ads
Breaking News

ವಿಕಾಸನ ಟ್ರಸ್ಟ್ (ರಿ) ಉದ್ಘಾಟನಾ:ಉಚಿತ ಡೆಂಟಲ್ ಕಿಟ್ ವಿತರಣೆ

ಮಂಗಳೂರಿನ ವಿಕಾಸನ ಟ್ರಸ್ಟ್ ರಿಜಿಸ್ಟರ್ ಇದರ ಉದ್ಘಾಟನಾ ಸಮಾರಂಭ ಜರುಗಿತ್ತು. ಉದ್ಘಾಟನಾ ಪ್ರಯುಕ್ತ ಉಚಿತ ಡೆಂಟಲ್ ಕಿಟ್ ವಿತರಣಾ ಹಾಗೂ ಆಟಿಸಂನ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್‌ಡಿಎಂ ಮಂಗಳಾ ಜ್ಯೋತಿ ಸೂಲ್ಕ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೇಯರ್ ಭಾಸ್ಕರ್ ಕೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು,ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ವಿಕಾಸನ ಟ್ರಸ್ಟ್‌ನ ಸಮಾಜ ಮುಖಿ ಕೆಲಸ ಶ್ಲಾಘನೀಯ ಎಂದು ಹೇಳಿದರು.ಹಾಸ್ಯನಟ ಭೋಜರಾಜ್ ವಾಮಂಜೂರು ಮಾತನಾಡಿ, ಸಮಾಜ ಮುಖಿ ಕೆಲಸ ಮಾಡುತ್ತಿದೆ.

ವಿಕಾಸನ ಟ್ರಸ್ಟ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಾ ಹಾರೈಸಿದರು .ವಿಕಾಸನ ಟ್ರಸ್ಟ್‌ನ ಅಧ್ಯಕ್ಷೆ ಶೈಲಜಾ ಬಿ.ಕೇಶವ ಅವರು ವಿಕಾಸ್ ಟ್ರಸ್ಟ್‌ನ ಧ್ಯೇಯ ಹಾಗೂ ಉದ್ದೇಶ ಕುರಿತು ಮಾಹಿತಿ ನೀಡಿದರು.ಈ ವೇಳೆ ಯೆನಪೋಯ ಡೆಂಟಲ್ ಕಾಲೇಜು ಪ್ರಿನ್ಸಿಪಾಲ್ ಡಾ|ಶ್ಯಾಮ್ ಭಟ್ , ಎಸ್‌ಡಿಎಂ ಮಂಗಳಾ ಜ್ಯೋತಿ ಸೂಲ್ಕ್‌ನ ಕಾರ್ಯದರ್ಶಿ ಪ್ರೋ.ಎ.ರಾಜೇಂದ್ರ ಭಟ್ , ಮನಃಶಾಸ್ತ್ರಜ್ಞೆ ಶ್ವೇತಾ ಕೆ.ಟಿ, ಕಾಪೋರೇಟರ್ ಹೇಮಲತಾ ಸಾಲ್ಯಾನ್, ವಿಕಾಸನ ಟ್ರಸ್ಟ್‌ನ ಕಾರ್ಯದರ್ಶಿ ಸವಿತಾಶ್ರೀ, ಟ್ರಸ್ಟಿ ಗೀತಾ ಶೆಟ್ಟಿ ,ಗಣೇಶ್ ಭಟ್, ರಾಜೇಶ್ ಸುವರ್ಣ, ಶಿಕ್ಷಕಿ ಮರಿಯಾ ಸೇರಿದಂತೆ ಇನ್ನಿತರು ಉಪಸ್ಥಿತಿರಿದ್ದರು. ಕಾರ್ಯಕ್ರಮಕ್ಕೆ ಮಂಗಳೂರಿನ ಲಯನ್ಸ್ ಕ್ಲಬ್, ಯೆನಪೋಯ ಡೆಂಟಲ್ ಕಾಲೇಜು, ಎಸ್‌ಡಿಎಂ ಮಂಗಳಾ ಜ್ಯೋತಿ ಸಹಭಾಗಿತ್ವ ವಹಿಸಿತ್ತು.

Related posts

Leave a Reply