Header Ads
Header Ads
Breaking News

ವಿಕಾಸ್ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ನಡೆಯಿತು.ಗಣ್ಯರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯಸ್ಥರಾದ ಕೃಷ್ಣ ಜೆ ಪಾಲೇಮಾರ್ ಅವರುರು ಪ್ರಕೃತಿ ನಾಶಮಾಡುತ್ತಿರುವ ಮನುಷ್ಯ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಇಂದಿನ ದುರಂತ.

   ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಮಂಗಳೂರಿನ ಸುಮಾರು50 ಶಾಲೆಗಳ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಫಿಶರೀಸ್ ಕಾಲೇಜಿನ ರಿಸೋರ್ಸ್ ಆಂಡ್ ಮ್ಯಾನೆಜ್‌ಮೆಂಟ್ ವಿಭಾಗದ ಮುಖ್ಯಸ್ಥ ಡಾ ಎಸ್ ಎಂ ಶಿವಪ್ರಕಾಶ್, ಟ್ರಸ್ಟಿ ಜೆ ಕೊರಗಪ್ಪ, ಸಂಚಾಲಕ ಡಾ ಡಿ ಶ್ರೀಪತಿ ರಾವ್, ನಿರ್ದೇಶಕ ಡಾ ಅನಂತ್ ಪ್ರಭು ಜಿ, ವಿಕಾಸ್ ವಿದ್ಯಾಸಂಸ್ಥೆಯ ಸಮಸ್ವಯಧಿಕಾರಿ ಪಾರ್ಥಸಾರಥಿ ಪಾಲೇಮಾರ್, ಪ್ರಾಂಶುಪಾಲ ಟಿ ರಾಜಾರಾಮ್ ರಾವ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply