Header Ads
Header Ads
Breaking News

ವಿಕಾಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆ

ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮವನ್ನು ಕೈಗೊಳ್ಳುವುದರ ಮೂಲಕ ಆಚರಿಸಲಾಯಿತು.ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮೌಲ್ಯಗಳನ್ನು ಪ್ರತಿದಿನವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಮಾಜಿ ಸಚಿವ ಹಾಗೂ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಜೆ. ಪಾಲೇಮಾರ್ ಅವರು ಮಾತನಾಡಿ, ನಮ್ಮ ಪ್ರಧಾನ ಮಂತ್ರಿಯವರ ಸ್ವಚ್ಚ ಭಾರತದ ಪರಿಕಲ್ಪನೆಯ ಪ್ರಾಮುಖ್ಯತೆಯನ್ನು ವಿಕಾಸ್ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಮನವರಿಕೆ ಮಾಡುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದರು.ಈ ಸಂದರ್ಭ ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕಲ್ಯ, ವಿಕಾಸ್ ಎಜ್ಯು ಸೊಲ್ಯೂಷನ್ ನಿದೇರ್ಶಕ ಡಾ. ಅನಂತ ಪ್ರಭು ಜಿ. ವಿಕಾಸ್ ವಿದ್ಯಾಸಂಸ್ಥೆಉ ಸಮನ್ವಯಾಧಿಕಾರಿ ಪಾರ್ಥಸಾರಥಿ ಜೆ. ಪಾಲೇಮಾರ್ ,ಕೌನ್ಸೆಲರ್ ಡಾ. ಮುಂಜುಳಾ ರಾವ್, ಪ್ರಾಂಶುಪಾಲರಾದ ಪ್ರೊ. ಓ. ರಾಜಾರಾಮ್ ರಾವ್, ಕಾಮರ್ಸ್ ಇನ್‌ಚಾರ್ಜ್ ಐಶರ್ಯ ರಾವ್ ಉಪಸ್ಥಿತರಿದ್ದರು.ವಿಕಾಸ್ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸ್ವಚ್ಚ ಭಾರತ ಅಭಿಯಾನದಲ್ಲಿ ಪಾಲ್ಗೊಂಡರು

Related posts

Leave a Reply