Header Ads
Header Ads
Breaking News

ವಿಕಾಸ್ ಪಿಯು ಕಾಲೇಜಿನಲ್ಲಿ72ನೇ ಸ್ವಾತಂತ್ರ್ಯೋತ್ಸವ ಆಚರಣೆ. ಪ್ರೊ. ಎ.ಎಮ್ ನರಹರಿ ಅವರಿಂದ ಧ್ವಜಾರೋಹಣ.

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಪಿಯು ಕಾಲೇಜಿನಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ಎ.ಎಮ್ ನರಹರಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ದಿನದ ಸಂದೇಶ ಸಾರಿದರು.ಆನಂತರ ಕಾರ್ಯಕ್ರiದ ಅಧ್ಯಕ್ಷತೆಯನ್ನು ವಹಿಸಿದ್ದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಕೃಷ್ಣ ಜೆ ಪಾಲೆಮಾರ್ ಮಾತನಾಡಿ, ನಾಡಿನ ಜನತೆಗೆ 72ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.ಈ ಸಂದರ್ಭ ಮಂಗಳೂರಿನ ಡಿಸಿಆರ್‌ಇ ಪೊಲೀಸ್ ಅಧೀಕ್ಷಕರಾದ ಡಾ. ವೇದಮೂರ್ತಿ, ಮೇರಿಹಿಲ್‌ನ ವಿಕಾಸ್ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply