Header Ads
Header Ads
Header Ads
Breaking News

ವಿಕಾಸ್ ಪಿಯು ಕಾಲೇಜ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರೊ.ಪಿ. ಶಾಂತರಾಮ್ ಅವರಿಗೆ ಕಾಲೇಜಿನಿಂದ ಸನ್ಮಾನ

ಮಂಗಳೂರಿನ ಪ್ರತಿಷ್ಟಿತ ವಿಕಾಸ್ ಪಿಯು ಕಾಲೇಜ್ ವತಿಯಿಂದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಿತು
ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಅಲೋಷಿಯಸ್ ಕಾಲೇಜಿನ,ರಾಸಯನಿಕ ವಿಭಾಗದ ಮುಖ್ಯಸ್ಥ ಫ್ರೋ.ಪಿ ಶಾಂತರಾಮ್ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು, ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಗೌರವ ನೀಡುವ ರೀತಿಯಲ್ಲಿ,ಶಿಕ್ಷಕರಿಗೂ ಗೌರವ ನೀಡಬೇಕು, ಅದರೊಂದಿಗೆ ಶಿಕ್ಷಕರು ಕೂಡ ವಿದ್ಯಾರ್ಥಿಗಳು ಆದರ್ಶ ಪ್ರಿಯರಾಗಿರಬೇಕು ಎಂದು ಹೇಳಿದರು
ಬಳಿಕ ವಿಕಾಸ್ ಪಿಯು ಕಾಲೇಜಿನ ಮುಖ್ಯಸ್ಥ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಮಾತನಾಡಿ, ಶಿಕ್ಷಕರ ದಿನಾಚರಣೆ ಮಾತ್ರವಲ್ಲದೇ ವರ್ಷದ ೩೬೫ ದಿನ ಕೂಡ ಶಿಕ್ಷಕರಿಗೆ ಗೌರವನ್ನ ನೀಡಬೇಕು,ಶಿಸ್ತು ಸಂಯಮ ಶಾಲಾ ಕಾಲೇಜು ದಿನಗಳಲ್ಲಿ ಅಳವಡಿಸಿಕೊಳ್ಲು ಸಾಧ್ಯ ಎಂದರು.ಈ ವೇಳೆ ಶಿಕ್ಷಕರಾಗಿ ಸೇವೆ ಸಲ್ಲಿಸದ ಪ್ರೊ.ಪಿ ಶಾಂತರಾಮ್ ಅವರನ್ನ ಗೌರವಿಸಲಾಯಿತು.
ಪಿ.ಎಚ್.ಡಿ ಪಡೆದ ಹಿನ್ನೆಲೆ ಹಿಂದಿ ವಿಭಾಗದ ಉಪನ್ಯಾಸಕರಾದ ಡಾ.ಆಶಾ ಕುಮಾರಿ ಅವರನ್ನ ಸನ್ಮಾನನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಶ್ರೀಪತಿ ರಾವ್, ಮಂಡಳಿ ಸಲಹೆಗಾರರಾದ ಡಾ.ಅನಂತ್ ಪ್ರಭು ಜಿ, ಪ್ರಾಂಶುಪಾಲರಾದ ಫ್ರೋ.ಟಿ.ರಾಜಾರಾಂ ರಾವ್, ಪಾರ್ಥಸಾರಥಿ, ವಿದ್ಯಾ ಕಾಮತ್ ಮತ್ತಿತರು ಉಪಸ್ಥಿತರಿದ್ದರು

Related posts

Leave a Reply