Header Ads
Header Ads
Breaking News

ವಿಕೆ ಉತ್ಸವ ಪ್ರಯುಕ್ತ ಶಾಪ್ ಆಂಡ್ ವಿನ್ ಲಕ್ಕಿ ಡ್ರಾ ಯೆಯ್ಯಾಡಿ ಸಮೀಪದ ವಿ.ಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕಾರ್ಯಕ್ರಮ

ಮಂಗಳೂರಿನ ಯೆಯ್ಯಾಡಿ ಸಮೀಪದ ವಿ.ಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ವಿಕೆ ಉತ್ಸವ ಪ್ರಯುಕ್ತ ಶಾಪ್ ಆಂಡ್ ವಿನ್ ಲಕ್ಕಿ ಡ್ರಾ ನಡೆಯಿತು.  ದೀಪಾವಳಿ , ಕ್ರಿಸ್ಮಸ್ ಹಾಗೂ ಹೊಸ ವರುಷದ ಪ್ರಯುಕ್ತ ನಗರದ ವಿ.ಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಗ್ರಾಹಕರಿಗಾಗಿ ಆಯೋಜಿಸಲಾಗಿದ್ದ ಶಾಪ್ ಆಂಡ್ ವಿನ್ ಇದರ ಲಕ್ಕಿ ಕೂಪನ್ ಡ್ರಾ ಮೂಲಕ ಅದೃಷ್ಠ ಗ್ರಾಹಕರನ್ನು ಆಯ್ಕೆಗೊಳಿಸಲಾಯಿತು.

ಮೊದಲ ಬಹುಮಾನವಾಗಿ ನಾಗರಾಜ್ ಅವರು ರೆಡಿ ಗೋ ಕಾರನ್ನು ತನ್ನದಾಗಿಸಿಕೊಂಡರು, ದ್ವಿತೀಯ ಬಹುಮಾನವನ್ನು ಸಂತೋಷ್ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ದಿನೇಶ್ ಪಡೆದುಕೊಂಡರು. ಒಟ್ಟು 9 ಮಂದಿ ಅದೃಷ್ಠಶಾಲಿಯಾಗಿದ್ದಾರೆ. ಅದೃಷ್ಠ ಶಾಲಿ ವಿಜೇತರನ್ನು ಕೆನರಾ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ನಾಗರಾಜ್ ಶೆಣೈ ಅವರು ಆಯ್ಕೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಉದ್ದಿಮೆಯನ್ನು ಆರಂಭಿಸಿಕೊಂಡಿರುವುದು , ಒಳ್ಳೆಯ ಬೆಳವಣಿಗೆ ಅಂತಾ ಹೇಳಿದರು

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಸಂತೋಷ್ ಕುಮಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಎ.ಎಸ್. ಭಟ್ , ವಿ.ಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್‌ನ ಮಾಲಕ ವಿಠ್ಠಲ ಕುಲಾಲ್, ಮತ್ತಿತರು ಉಪಸ್ಥತರಿದ್ದರು.