Header Ads
Breaking News

ವಿಖಾಯ ಸ್ಥಾಪಕ ದಿನದ ಪ್ರಯುಕ್ತ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಉಳ್ಳಾಲ:ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ವತಿಯಿಂದ ವಿಖಾಯ ಸ್ಥಾಪಕ ದಿನದ ಪ್ರಯುಕ್ತ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಅಸೈಯದ್ ಅಬೂಬಕ್ಕರ್ ಸಿದ್ದೀಕ್ ತಂಞಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ರಿಯಾಝ್ ರಹ್ಮಾನಿ ಮಾತನಾಡಿ ಎಸ್ಕೆ ಎಸ್ಸೆಸ್ಸೆಫ್ ಸಂಘಟನೆ ಕೊಡಗು ಪ್ರದೇಶದಲ್ಲಿ ಪ್ರಕೃತಿ ವಿಕೋಪವಾದಾಗ ಅಲ್ಲಿಗೆ ದಾವಿಸಿ ನೇರೆ ಸಂತ್ರಸ್ತ 400ಮಂದಿಯನ್ನು ರಕ್ಷಿಸಿದ್ದೇವೆ.

ಇಂತಹ ಜನ ಸ್ನೇಹಿ ಸೇವೆ ಮಾಡುವ ಮೂಲಕ ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಞಳ್ ಕಿನ್ಯ, ವಿಖಾಯ ಕನ್ವೀನರ್ ಹಸೈನಾರ್ ಉರುಮನೆ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ನೌಫಾಲ್ ಬಿ. ಕಸ್ಟರ್ ಪ್ರ.ಕಾರ್ಯದರ್ಶಿ ನೌಷಾದ್ ಬದ್ಯಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply