Header Ads
Header Ads
Breaking News

ವಿಗ್ರಹ ಕಳ್ಳತನ ಪ್ರಕರಣ ಮಂಗಳೂರಿನ ಕಾಂಗ್ರೆಸ್ ಮುಖಂಡ ಬಂಧನ ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ಆಸ್ಟಿನ್ ಪಿರೇರಾ ಬಂಧಿತ

ವಿಗ್ರಹ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡನೊಬ್ಬ ಬಂಧನಕ್ಕೀಡಾಗಿದ್ದಾನೆ. ಎನ್ ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟಿನ್ ಪಿರೇರಾ ಬಂಧಿತ.ಎರಡು ದಿನಗಳ ಹಿಂದೆ ಕುಂದಾಪುರದ ಕೋಟೇಶ್ವರ ಬಳಿ ನಾಲ್ಕು ಪಂಚಲೋಹದ ಜೈನ ತೀರ್ಥಂಕರರ ವಿಗ್ರಹಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಈತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.

ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್ ಲೋಬೋ, ಮೊಯ್ದೀನ್ ಬಾವಾಗೆ ಆಪ್ತನಾಗಿದ್ದ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಂಗಳೂರಿಗೆ ಬಂದಾಗ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೊ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿಗಳ ಬಳಿಯಿಂದ ನೋಟು ಎಣಿಸುವ ಯಂತ್ರ, ೪೦ ಸಾವಿರ ರೂ., ಹಾಗೂ ಎರ್ಟಿಗಾ ಕಾರು ವಶಕ್ಕೆ ಪಡೆಯಲಾಗಿತ್ತು. ಇದೀಗ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಟಿನ್ ಪಿರೇರಾನನ್ನು ಎನ್ ಎಸ್ ಯು ಐ ನಿಂದ ತೆಗೆದುಹಾಕಲು ಚಿಂತನೆ ನಡೆದಿದೆ.

ವರದಿ: ನಾಗೇಶ್ ಕಾವೂರು

Related posts

Leave a Reply