Header Ads
Header Ads
Breaking News

ವಿಜಯಬ್ಯಾಂಕ್ ತುಳುನಾಡಿನ ಹೆಮ್ಮೆಯ ಬ್ಯಾಂಕ್,ಮುಲ್ಕಿ ಸುಂದರ ರಾಮ ಶೆಟ್ಟರ ಕನಸಿಗೆ ಕೊಳ್ಳಿಯಿಟ್ಟ ಬಿಜೆಪಿ : ಡಿ.ಸಿ ಕಚೇರಿ ಎದುರು ಸಮಾನ ಮನಸ್ಕರರ ಪ್ರತಿಭಟನೆ

ವಿಲೀನದ ಹೆಸರಿನಲ್ಲಿ ತುಳುನಾಡಿನ ಹೆಮ್ಮೆಯ ವಿಜಯಬ್ಯಾಂಕ್ ಮುಚ್ಚಿಸಿ ಮುಲ್ಕಿ ಸುಂದರ ರಾಮ ಶೆಟ್ಟರ ಕನಸಿಗೆ ಕೊಳ್ಳಿಯಿಟ್ಟ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾನ ಮನಸ್ಕರರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಟೇಲ್ ಮತ್ತು ಬ್ಯಾಂಕಿಂಗ್ ಉದ್ಯಮದಲ್ಲಿ ಇಡೀ ದೇಶ ಗುರುತಿಸುತ್ತಿದೆ. ಐದು ಬ್ಯಾಂಕುಗಳನ್ನು ಹುಟ್ಟು ಹಾಕಿದ ಹೆಮ್ಮೆಯ ಜಿಲ್ಲೆ ನಮ್ಮದು ಇಲ್ಲಿ ಹುಟ್ಟಿದ ಬ್ಯಾಂಕುಗಳು ನಷ್ಟದಲ್ಲಿಲ್ಲ ಮತ್ತು ಯಾವುದೇ ಗ್ರಾಹಕರಿಗೆ ಮೋಸ ಮಾಡಲಿಲ್ಲ, ಆದರೇ ಕೇಂದ್ರದ ಮೋದಿ ಸರ್ಕಾರ ನಮ್ಮ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು.ಆನಂತರ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ ಈ ವಿಚಾರ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಬೇರೆ ಕಡೆ ಆಗುತ್ತಿದ್ದರೆ ಇಡೀ ದೇಶವೇ ಹೊತ್ತಿ ಉರಿಯುತ್ತಿತ್ತು ಆದರೇ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ಜಿಲ್ಲೆಯ ಜನರಿಗೆ ಇನ್ನೂ ಅರ್ಥವಾಗಿಲ್ಲ ಇದು ಮಾತ್ರವಲ್ಲ ನೇತ್ರಾವತಿ ನದಿ ತಿರುವು ಯೋಜನೆ, ಟೋಲ್ಗೇಟ್ ಸಮಸ್ಯೆ ಈಗ ಬ್ಯಾಂಕ್ ಸಮಸ್ಯೆ ನಾಳೆ ನಮ್ಮ ಮನೆಗೆ ಸಮಸ್ಯೆ ಬಂದರೂ ಇದು ನಮ್ಮದಲ್ಲ ಪಕ್ಕದ ಮನೆಯವರದ್ದು ಎಂದು ಕೂರುವ ಜನ ನಮ್ಮವರು ಎಂದು ಹೇಳಿದರು.
ಈ ಸಂದರ್ಭ ಪ್ರತಿಭಟನೆಯಲ್ಲು ಮಾಜಿ ಸಚಿವರಾದ ರಮನಾಥ ರೈ, ಡಿವೈಎಫ್‌ಐ ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಪ್ರಗತಿಪರ ಹೋರಾಟಗಾರ ಎಂ.ಜಿ.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply