Header Ads
Header Ads
Breaking News

ವಿಜಯಾಬ್ಯಾಂಕ್ ವಿಲೀನ ವಿಚಾರಕ್ಕೆ ವಿರೋಧ : ಜನಪ್ರತಿನಿಧಿಗಳ ವಿರುದ್ಧ ಖಂಡನಾ ನಿರ್ಣಯ ಸಭೆ

ದೇಶದಲ್ಲಿ ಲಾಭದಿಂದ ನಡೆಯುತ್ತಿದ್ದ ವಿಜಯಾ ಬ್ಯಾಂಕ್ ನಷ್ಟದಲ್ಲಿದ್ದು ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಇದನ್ನು ಖಂಡಿಸಿ ಜನಪ್ರತಿನಿಧಿಗಳ ವಿರುದ್ಧ ಖಂಡನಾ ನಿರ್ಣಯಕ್ಕೆ ಆಗ್ರಹಿಸಿ ಸಭೆ ನಡೆಸಲಾಗಿದೆ ಎಂದು ಹೋರಾಟಗಾರ ದಿನೇಶ್ ಉಳೆಪಾಡಿ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನಗೊಳಿಸಿರುವ ಬಗ್ಗೆ ವಿಜಯ ಬ್ಯಾಂಕಿನ ಗ್ರಾಹಕರಷ್ಟೇ ಅಲ್ಲ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ವಿರೋಧಿಸುತ್ತಿದ್ದಾರೆ ಎಂದ ಅವರು ಫೆಬ್ರವರಿ 9ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

Related posts

Leave a Reply