Header Ads
Breaking News

ವಿಜಯಾ ಬ್ಯಾಂಕ್ ವಿಲೀನ ವಿಚಾರದಲ್ಲಿ ಪ್ರಧಾನಿ ಮೋದಿಗೆ ಪತ್ರ : ಐವನ್ ಡಿಸೋಜಾ ಹೇಳಿಕೆ

ವಿಜಯಾ ಬ್ಯಾಂಕ್ ವಿಲೀನಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರೆಲಾಗಿದೆ. ಅವಕಾಶ ಮಾಡಿಕೊಡದಿದ್ದರೆ, ಗೋ ಬ್ಯಾಕ್ ಮೋದಿ ಹೆಸರಲ್ಲಿ ಪ್ರತಿಭಟನೆ ನಡೆಸಲಾಗುವುದು ಅಂತಾ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 13ರಂದು ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯಾ ಬ್ಯಾಂಕ್ ವಿಲೀನ ಕುರಿತು ಮಾತುಕತೆ ನಡೆಸಲು ಅವಕಾಶ ಕೊಡಬೇಕು. ಈ ಕುರಿತು ಕಾಂಗ್ರೆಸ್‌ನಿಂದ ಜಿಲ್ಲಾ ಚುನಾವಣಾಧಿಕಾರಿಗೆ ಪತ್ರ ಬರಲಾಗಿದೆ ಎಂದು ತಿಳಿಸಿದರು. ಅವಕಾಶ ಮಾಡಿಕೊಡಿದಿದ್ದರೆ, ಗೋ ಬ್ಯಾಕ್ ಮೋದಿ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಇನ್ನು ಪ್ರಧಾನಮಂತ್ರಿ ಮೋದಿ ಪರ ಇಮ್ರಾನ್ ಖಾನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಐವನ್, ಪಾಕಿಸ್ತಾನದ ಬಿರಿಯಾನಿ ತಿಂದ ಬಳಿಕ ಅವರಿಗೂ ಮೋದಿಯೇ ಬೇಕಿದೆ.ಏಕೆಂದರೆ ಮೋದಿಯವರು ಕರೆಯದೇ ಅಲ್ಲಿಗೆ ಹೋಗ್ತಾರೆ. ಬಹುಶಃ ಅಂಬಾನಿ ,ಅದಾನಿಯವರು ಕಾಂಪ್ರಮೈಸ್ ಮಾಡಿಸಿ ಇರಬೇಕೆಂದು ಎಂದರು.

Related posts

Leave a Reply

Your email address will not be published. Required fields are marked *