Header Ads
Header Ads
Breaking News

ವಿಜಯಾ ಬ್ಯಾಂಕ್ ವಿಲೀನ ವಿಚಾರ : ಬೈಂದೂರಿನಲ್ಲಿ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕರಾವಳಿ ಭಾಗದ ವಿಜಯಾಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದ ಕೇಂದ್ರ ಸರ್ಕಾರದ ನೀತಿಗೆ ಬೈಂದೂರಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.

ಬೈಂದೂರಿನ ವಿಜಯ ಬ್ಯಾಂಕ್‌ನ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅವರು, ದೇಶದಲ್ಲಿ ಮೋದಿ ನೇತ್ರತ್ವದ ಸರಕಾರ ಬಂಡವಾಳ ಶಾಹಿಗಳಿಗೆ ಸಹಕಾರ ನೀಡುತ್ತಿದೆ. ದೇಶದಲ್ಲಿ ಲಾಭ ಬರುವ ಬಹುತೇಕ ಕಂಪೆನಿಗಳು ಖಾಸಗಿಯವರಿಗೆ ಕೇಂದ್ರ ಸರಕಾರ ನೀಡಿದೆ. ವಿಜಯ ಬ್ಯಾಂಕ್ ಅತೀ ಹೆಚ್ಚು ಲಾಭ ಬರುವ ವಾಣಿಜ್ಯ ಬ್ಯಾಂಕ್‌ಗಳಾಗಿದ್ದು ಇದನ್ನು ವಿಲೀನಗೊಳಿಸುವುದು ಕರಾವಳಿ ಭಾಗಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಉಪ್ಪುಂದ,ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ತಾ.ಪಂ ಸದಸ್ಯೆ ಪ್ರಮೀಳಾ ದೇವಾಡಿಗ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *