Header Ads
Breaking News

ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ : ಸಮಾನಮನಸ್ಕರಿಂದ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆ

ಇನ್ನು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇರುವ ವಿಜಯ ಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಸಮಾನಮನಸ್ಕರಿಂದ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಿಸಲಾಯ್ತು. ಕರಾವಳಿಯ ಜನರ ಆಗ್ರಹವನ್ನು ಕಡೆಗಣಿಸಲಾಗಿದೆ. ಕೇವಲ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಹೊರತು ಬ್ಯಾಂಕ್‌ನ್ನು ಉಳಿಸುವ ಕೆಲಸ ಮಾಡಿಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ, ಜನಪ್ರತಿನಿಧಿಗಳು ಬ್ಯಾಂಕ್‌ನ್ನು ಉಳಿಸುವ ಬದ್ಧತೆಯನ್ನು ಮಾಡಿಲ್ಲ, ಹೀಗಾಗಿ ಹಿನ್ನಡೆಯೇ ಬ್ಯಾಂಕ್ ಉಳಿಸುವ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಈ ವೇಳೆ ಮಾಜಿ ಮೇಯರ್ ಕೆ.ಆಶ್ರಫ್, ಎಂ.ಜಿ.ಹೆಗ್ಡೆ, ಸುನೀಲ್ ಕುಮಾರ್ ಬಜಾಲ್ ,ದಯಾನಂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *