Header Ads
Header Ads
Breaking News

ವಿಜಯ ಬ್ಯಾಂಕ್ ವಿಲೀನ ಆದೇಶ ಹಿಂಪಡೆಯುವಂತೆ ಫೆ. 2 ರಂದು ಮುಲ್ಕಿಯಲ್ಲಿ ಪ್ರತಿಭಟನಾ ಜಾಥಾ

ವಿಜಯ ಬ್ಯಾಂಕ್ ವಿಲೀನ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಪೆಬ್ರವರಿ ೨ ರಂದು ಮೂಲ್ಕಿಯಲ್ಲಿ ನಡೆಯುವ ಪ್ರತಿಭಟನಾ ಜಾಥದ ಬ್ಯಾನರ್‌ನ್ನು ವಿಶ್ವ ಬಂಟರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಐಕಳ ಹರಿಶ್ ಶೆಟ್ಟಿ ಮೂಲ್ಕಿಯಲ್ಲಿ ಸುಂದರರಾಮ ಶೆಟ್ಟಿ ಗೋರಿಯ ಮುಂಭಾಗದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತಾನಡಿದ ಅವರು ಮೂಲ್ಕಿ ಸುಂದರರಾಮ ಶೆಟ್ಟಿಯವರು ತುಳುನಾಡ ರತ್ನ ಎಂದರೂ ತಪ್ಪಾಗಲಿಕ್ಕಿಲ್ಲ, ಕರಾವಳಿಯ ಅನೇಕ ಕುಟುಂಬಗಳು ಇಂದು ಜೀವನ ನಡೆಸುತ್ತಿದ್ದರೆ ಅದು ಸುಂದರರಾಮ ಶೆಟ್ಟರಿಂದ ಸಾಧ್ಯವಾಗಿದೆ, ವಿಜಯ ಬ್ಯಾಂಕ್ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದು ಮಾತ್ರವಲ್ಲದೆ, ಲಾಭದಲ್ಲಿಯೂ ಇದೆ ಆದರೆ ನಷ್ಟ ಹೊಂದಿರುವ ಬ್ಯಾಂಕ್ ನೊಂದಿಗೆ ವಿಲೀನಗೋಳಿಸುತ್ತಿರುವುದು ದುರಾದೃಷ್ಟಕರ ಎಂದರು.

ಕನ್ನಡ ಸಾಹಿತ್ಯ ಪರಿಷ್ಯತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ನಷ್ಟದಲ್ಲಿ ಬ್ಯಾಂಕ್ ನೊಂದಿಗೆ ವಿಲೀನ ಪ್ರಕ್ರಿಯೆ ಸರಿಯಾದ ಕ್ರಮವಲ್ಲ, ವಿಲೀನ ಅಗತ್ಯವಿದ್ದರೆ ಬ್ಯಾಂಕ್ ಆಪ್ ಬರೋಡವನ್ನು ವಿಜಯಾಬ್ಯಾಂಕ್ ನೊಂದಿಗೆ ವೀಲಿನ ಮಾಡಲಿ ಎಂದರು.

ಈ ಸಂದರ್ಭ ವಿಜಯಬ್ಯಾಂಕ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ದಿನೆಶ್ ಹೆಗ್ಡೆ ಉಳೆಪಾಡಿ ಮುಂಬೈ ಬಂಟರ ಸಂಘದ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರೇಮಾನಾಥ ಶೆಟ್ಟಿ ಮುಂಡ್ಕೂರು, ಸಂತೋಷ್ ಕುಮಾರ್ ಹೆಗ್ಡೆ, ದೇವಪ್ರಸಾದ್ ಪುನರೂರು, ಸುರೇಶ್ ಶೆಟ್ಟಿ ಸೂರಿಂಜೆ, ರಂಗನಾಥ ಶೆಟ್ಟಿ, ಅಚ್ಯುತ್ ಕುಡ್ವ, ದೇವಪ್ರಸಾದ್ ಕೆಂಪುಗುಡ್ದೆ, ಶ್ರೀಶ ಸರಪ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply