Header Ads
Header Ads
Breaking News

ವಿಜಯ ಬ್ಯಾಂಕ್ ವಿಲೀನ ವಿಚಾರ:ವಿಜಯ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಹಾಗೂ ದೇನಾ ಬ್ಯಾಂಕ್‌ನ ಜೊತೆಗೆ ವಿಲೀನಗೊಳಿಸಿದರ ವಿರುದ್ಧ ಜ್ಯೋತಿ ವೃತ್ತದ ಬಳಿ ಇವರು ವಿಜಯ ಬ್ಯಾಂಕ್‌ನ ಪ್ರಧಾನ ಕಚೇರಿಯ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.
ಈ ವೇಳೆ ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಆಗಿರುವ ವಿಜಯ ಬ್ಯಾಂಕ್‌ನ ಹೆಸರನ್ನು ಅಳಿಸುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಮೋದಿ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ. ಈ ವರೆಗೆ ಮಾವುದೇ ಸರ್ಕಾರವು ನಮ್ಮ ಜಿಲ್ಲೆಯ ಬ್ಯಾಂಕ್‌ನ ಹೆಸರನ್ನು ಬದಲಾಯಿಸಿಲ್ಲ. ಮೋದಿ ಸರ್ಕಾರದ ನೀತಿಯನ್ನು ಕಾಂಗ್ರಸ್ ಬಲವಾಗಿ ಖಂಡಿಸುತ್ತದೆ ಎಂದು ಹೇಳೀದರು.

ಬಳಿಕ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ವಿಜಯ ಬ್ಯಾಂಕ್ ಅತ್ತಾವರ ಬಾಲಕೃಷ್ಣ ಶೆಟ್ಟಿಯವರ ಆಶೋತ್ತರವನ್ನು ಇಟ್ಟುಕೋಂಡು ಹುಟ್ಟು ಹಾಕಿದ ಬ್ಯಾಂಕ್. ಸುಂದರರಾಮ್ ಶೆಟ್ಟಿಯವರು ರಕ್ತವನ್ನು ಬೆವರಾಗಿಸಿ ಶ್ರಮಿಸಿ ಬ್ಯಾಂಕ್ ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಇದರ ವಿಲೀನ ನಮ್ಮ ಜನರಿಗೆ ಮಾಡಿದ ಮೋಸ ನಮ್ಮ ಜಿಲ್ಲೆಯ ಸಂಸದರು ಮತ್ತು ಬಿಜೆಪಿ ಶಾಸಕರು ಸತ್ತುಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ವಿಜಯ ಬ್ಯಾಂಕ್‌ನ ಹಿರಿಯ ಉದ್ಯೋಗಿ ವಿಮಲಾ ರೈ ಮಾತನಾಡಿ ನನಗೆ ಇಂದು ಬಹಳಾ ಬೇಸರವಾಗುತ್ತಿದೆ ನಾನು ಸುಮಾರು ೩೧ ವರ್ಷ ವಿಜಯ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಜನ್ಮದಲ್ಲಿ ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ರುಣ ತೀರಿಸಲು ಸಾಧ್ಯವಿಲ್ಲ ಎಂಞದು ಹೇಳಿದರು

ಈ ಸಂದರ್ಭ ಕಾಂಗ್ರಸ್‌ನ ಹಲವು ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply