Header Ads
Header Ads
Breaking News

ವಿಜಯ ಬ್ಯಾಂಕ್ ವಿಲೀನ ವಿಚಾರ:ಪುತ್ತೂರಿನಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಪುತ್ತೂರು: ವಿಜಯಾ ಬ್ಯಾಂಕ್‌ನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದರೆ ಬ್ಯಾಂಕ್‌ಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ವಿಜಯಾ ಬ್ಯಾಂಕ್ ವಿಲೀನಕರಣ ವಿರೋಧಿಸಿ ಪುತ್ತೂರು ಮುಖ್ಯರಸ್ತೆಯಲ್ಲಿರುವ ಕೆ.ಪಿ.ಕಾಂಪ್ಲೆಕ್ಸ್‌ನಲ್ಲಿನ ವಿಜಯಾ ಬ್ಯಾಂಕ್ ಪ್ರಧಾನ ಶಾಖೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ. ಬ್ಯಾಂಕ್ ವಿಲೀನದ ವಿರುದ್ಧ ನಡೆಯುವ ಪ್ರತಿಭಟೆಯ ಬಳಿಕವೂ ವಿಲೀನ ಮಾಡುವುದನ್ನು ಕೈ ಬಿಡದೇ ಇದ್ದರೆ ಮುಂದಿನ ದಿನದಲ್ಲಿ ನೂತನ ನಾಮಕರಣದೊಂದಿಗೆ ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್ ಮೂಲಕ ನಡೆಯುವ ಬ್ಯಾಂಕ್‌ಗಳಿಗೆ ಬೀಗ ಜಡಿಯಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರು ಘೋಷಣೆ ಹಾಕಿ ಹೇಳಿದ್ದಾರೆ. ಜಿಲ್ಲೆಯ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟು. ಜಿಲ್ಲೆಯನ್ನು ಸುಕ್ಷೀತರನ್ನಾಗಿ ಮಾಡಿದ ವಿಜಯಾ ಬ್ಯಾಂಕ್‌ನ್ನು ಮುಳುಗುತ್ತಿರುವ ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್‌ಗಳ ಜೊತೆ ವಿಲೀನಗೊಳಿಸಬಾರದು. ಒಂದು ವೇಳೆ ವಿಲೀನಗೊಳಿಸುವುದಿದ್ದರೆ, ಅವೆರಡನ್ನು ವಿಜಯ ಬ್ಯಾಂಕ್‌ನ ಜೊತೆಗೆ ವಿಲೀನಗೊಳಿಸಿ ವಿಜಯಾ ಬ್ಯಾಂಕ್‌ನ ಹೆಸರು ಹಾಗೂ ಬ್ರಾಂಡ್‌ನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಹೇಳಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿ ಹರೀಣಾಕ್ಷಿ ಜೆ.ಶೆಟಿ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿ ಡಿಸೊಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್ ಮೊದಲಾದವರು ಭಾಗವಹಿಸಿದ್ದರು

Related posts

Leave a Reply