Header Ads
Header Ads
Breaking News

ವಿಜಯ ಬ್ಯಾಂಕ್ ವಿಲೀನ ವಿಚಾರ ಸರಿಯಿದೆಯೆಂಬ ಬಿಜೆಪಿ ಹೇಳಿಕೆ ಖಂಡನೆ:ಐವನ್ ಡಿಸೋಜಾ ಹೇಳಿಕೆ

ವಿಜಯಬ್ಯಾಂಕ್ ವಿಲೀನ ಕ್ರಮ ಸರಿಯಿದೆ. ಬ್ಯಾಂಕ್ ಆಫ್ ಬರೋಡ ನಷ್ಟದಲ್ಲಿದ್ದರೂ ಅದು ದೊಡ್ಡ ಬ್ಯಾಂಕ್ ಎನ್ನುವ ಬಿಜೆಪಿ ನಾಯಕರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವೃವಾಗಿ ಖಂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.ಇವರು ಕರಾವಳಿ ಭಾಗದ ಪ್ರತಿಷ್ಠಿತ ವಿಜಯ ಬ್ಯಾಂಕನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ಮಂಗಳೂರಿನ ಪುರಭವನದ ಬಳಿ ಇವರು ಗಾಂಧಿ ಪ್ರತಿಮೆಯ ಎದರು ನಡೆಸಲಾದ ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ಮಾತನಾಡಿ 2196 ಬ್ರಾಂಚ್‌ಗಳನ್ನು ಹೊಂದಿರುವ ವಿಜಯಬ್ಯಾಂಕಿನ ಪ್ರತೀ ಬ್ರಾಂಚ್‌ನಲ್ಲಿ ಮುಲ್ಕಿ ಸುಂದರ್‌ರಾಮ್ ಶೆಟ್ಟಿಯವರ ಮತ್ತು ಅತ್ತಾವರ ಬಾಲಕೃಷ್ಣ ಶೆಟ್ಟಿಯವರ ಭಾವಚಿತ್ರವಿದೆ ಇದನ್ನು ಕೆಳಗಿಳಿಸುವ ನೀಚ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ನಮ್ಮ ರಕ್ತದ ಕಣ ಕಣದಲ್ಲಯೂ ವಿಜಯ ಬ್ಯಾಂಕ್ ಇದೆ ಎಂದು ಹೇಳಿದರು.

Related posts

Leave a Reply