Header Ads
Breaking News

ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಕಾಂಗ್ರೆಸ್‌ನಿಂದ ಕರಾಳ ದಿನ: ನಳಿನ್ ವಿರುದ್ಧ ಗುಡುಗಿದ ಮಿಥುನ್!

 ಕರಾವಳಿಯ ಪ್ರತಿಷ್ಠಿತ ವಿಜಯ ಬ್ಯಾಂಕ್ ವಿಲೀನ ಖಂಡಿಸಿ ಮಲ್ಲಿಕಟ್ಟೆಯಲ್ಲಿರುವ ಬ್ಯಾಂಕ್ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್‌ವತಿಯಿಂದ ಕಪ್ಪು ಪಟ್ಟಿಧರಿಸಿ ಕರಾಳ ದಿನಾಚರಣೆಯನ್ನ ಆಚರಿಸಲಾಯ್ತು, ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಹಾಗೂ ವಿಜಯಬ್ಯಾಂಕ್ ಉಳಿಸಿ ಎಂದು ಪ್ರತಿಭಟನಾಕರರು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ , ನಷ್ಠದಲ್ಲಿರುವ ಬರೋಡಾ ಬ್ಯಾಂಕ್‌ನ ಜೊತೆಯಲ್ಲಿ ವಿಜಯಬ್ಯಾಂಕ್‌ನ್ನು ವಿಲೀನ ಮಾಡುವುದು ಸರಿಯಲ್ಲ, ಸಾಕಷ್ಟು ಮಂದಿಗೆ ಉದ್ಯೋಗವನ್ನು ನೀಡಿದ ಬ್ಯಾಂಕ್ ಆಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕ್‌ನ್ನು ಉಳಿಸುವ ಕೆಲಸ ಮಾಡುತ್ತಿಲ್ಲ, ಮತ್ತೊಬ್ಬರ ಮೇಲೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ವಿಜಯ ಬ್ಯಾಂಕ್‌ನ್ನು ವಿಲೀನವನ್ನು ನಿಲ್ಲಿಸುತ್ತೇನೆ ಎಂದು ಸುಳ್ಳು ಹೇಳಿದ ಸಂಸದರು, ಜನತೆಗೆ ಮೋಸ ಮಾಡಿದ್ದಾರೆ. ನಿಜವಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಫೂಲ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.

Related posts

Leave a Reply

Your email address will not be published. Required fields are marked *