Header Ads
Header Ads
Breaking News

ವಿಟ್ಲ:ಅಕ್ರಮ ಮದ್ಯ ಮಾರಾಟ, ಆರೋಪಿ ಬಂಧನ

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಎಸ್‌ಐ ನೇತೃತ್ವದ ಪೊಲೀಸರ ತಂಡ ಒಬ್ಬ ಆರೋಪಿ ಹಾಗೂ ಮದ್ಯದ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡ ಘಟನೆ ಒಕ್ಕೆತ್ತೂರು ಸಮೀಪ ನಡೆದಿದೆ.

ಒಕ್ಕೆತ್ತೂರು ಮಾಡ ನಿವಾಸಿ ಪ್ರವೀಣ್ ಸಫಲ್ಯ(35) ಬಂಧಿತ ಆರೋಪಿ. ಈತ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತನ್ನ ಮನೆಯ ಹಿತ್ತಲಿನಲ್ಲಿ ಮದ್ಯದ ಪ್ಯಾಕೇಟ್‌ಗಳನ್ನು ಶೇಖರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸ್‌ಐ ಯಲ್ಲಪ್ಪ ಮತ್ತು ಪೊಲೀಸರ ತಂಡ ದಾಳಿ ನಡೆಸಿದೆ. ಈ ಸಂದರ್ಭ 190 ಮದ್ಯದ ಪ್ಯಾಕೇಟ್‌ಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ಆರು ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply