Header Ads
Header Ads
Breaking News

ವಿಟ್ಲ:ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡತ್ತಡ್ಕ ಶಿಬರಿಕಲ್ಲು ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು. 

ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು. ಗಂಗಾಧರ ಭಟ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಮನುಷ್ಯ ಇಚ್ಛೆ ಪಟ್ಟರೆ ಯಾವುದೇ ಒಳ್ಳೆ ಕೆಲಸ ಮಾಡಲು ಕಷ್ಟ ಇಲ್ಲ. ಕಾರ್ಯಕರ್ತರ ಶ್ರದ್ಧೆಯ ಕೆಲಸದಿಂದ ಹೊರಟ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ. ಎರಡು ಗ್ರಾಮಸ್ಥರೇ ದೇವಾಲಯವನ್ನು ಶ್ರದ್ಧಾ ಭಕ್ತಿಯಿಂದ ಕಟ್ಟು ಕೆಲಸ ಮಾಡಿರುವುದು ಬಹುದೊಡ್ಡ ವಿಶೇಷ. ಅರ್ಪಣೆಯ ಮೂಲಕ ನಿರ್ಮಾಣವಾದ ದೇವಸ್ಥಾನದಿಂದ ಊರಿಗೆ ಶ್ರೇಯಸ್ಸಾಗುತ್ತದೆ ಎಂದು ಹೇಳಿದರು.

ಧಾರ್ಮಿಕ ಪರಿಷತ್ ಸದಸ್ಯ ಜಗದೀಶ ಚೌಟ ಬದಿಗುಡ್ಡೆ ಅವರು ಬ್ರಹ್ಮಕಲಶೋತ್ಸವ ಕಲಶ ರಶೀದಿ ಬಿಡುಗಡೆಗೊಳಿಸಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಅವರು ಬ್ರಹ್ಮಕಲಶೋತ್ಸವ ಸರ್ವ ಸೇವಾ ರಶೀದಿಯನ್ನು ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಕೋಶಾಧಿಕಾರಿ ವೇಣುಗೋಪಾಲ ಶೆಟ್ಟಿ ಮರುವಾಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಟಿ. ವೆಂಕಟೇಶ್ವರ ನೂಜಿ, ಕೋಶಾಧಿಕಾರಿ ಗೋವಿಂದ ರಾಜ್ ಪೆರುವಾಜೆ, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಚಿದಾನಂದ ಗೌಡ ಪೆಲತ್ತಿಂಜ, ನಾಗೇಶ್ ಕುಂಡಡ್ಕ ಇದ್ದರು.

Related posts

Leave a Reply