Header Ads
Header Ads
Breaking News

ವಿಟ್ಲದಲ್ಲಿದ್ದಾರೆ ಸ್ವಾವಲಂಬಿ ಜೀವನ ನಡೆಸುವ ವ್ಯಕ್ತಿ:ಬರಡು ಭೂಮಿಯಲ್ಲಿ ಕೃಷಿ ತೋಟ ಮಾಡಿದ ಅಪ್ಪಟ ಕೃಷಿಕ.

ವಿಟ್ಲ: ಬೇಸಿಗೆ ಕಾಲದಲ್ಲಿ ತೋಟಗಳು ಒಣಗಿ ಹೋಗುತ್ತದೆ. ಸಾಲಸೂಲ ಮಾಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ಕೃಷಿಕರು ಕಂಗಾಲಾಗುತ್ತಾರೆ. ಆದರೆ ಇಲ್ಲೊಬ್ಬ ಕೃಷಿಕ ಯಾವುದೇ ಯಾಂತ್ರಿಕರಣವನ್ನು ಬಳಸದೇ ತನ್ನ ದೈಹಿಕ ಸಾಮರ್ಥ್ಯದಿಂದ ಸೊರಂಗ ಕೊರೆದು ವಿದ್ಯುತ್ ಬಳಸದೇ ಸುರಂಗ ನೀರಿನ ವ್ಯವಸ್ಥೆಯಲ್ಲಿ ಗ್ರ್ಯಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ಬಂಟ್ವಾಳ ತಾಲ್ಲೂಕಿನ ವಿಟ್ಲದ ಕೇಪು ಗ್ರಾಮದ ಅಮೈ ನಿವಾಸಿ 73 ಪ್ರಾಯದ ಮಹಾಲಿಂಗ ನಾಯ್ಕ ಎಂಬವರು 40 ವರ್ಷಗಳ ಹಿಂದೆ ಕೂಲಿ ಕೆಲಸ ಮಾಡಿ ತನ್ನ ಜೀವನ ಸಾಗಿಸುತ್ತಿದ್ದರು. ಅವರಿಗೆ ಪತ್ನಿ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿ ಹೊಂದಿರುವ ಸುಖಿ ಸಂಸಾರ ಇದೆ. ಕೂಲಿ ಕೆಲಸದಿಂದಲೇ ಜೀವನ ಹೋಗಬೇಕು. ಕೃಷಿಯ ಬಗ್ಗೆ ವಿಶಿಷ್ಟ ಆಸಕ್ತಿ ಹೊಂದಿರುವ ಇವರಿಗೆ ಸ್ವಂತ ತೋಟ ಹೊಂದಿ ಸ್ವಾವಲಂಬಿ ಜೀವನ ನಡೆಸುವ ಆಸಕ್ತಿ ಇತ್ತು. ಆದರೆ ಇವರಲ್ಲಿ ಯಾವುದೇ ಜಮೀನು ಇರಲಿಲ್ಲ. ತಾನು ಕೆಲಸ ಮಾಡುತ್ತಿದ್ದ ಸ್ಥಳೀಯ ಮಹಾಬಲ ಭಟ್ ಅವರು ಎರಡು ಎಕರೆ ಜಾಗವನ್ನು ನೀಡಲು ತೀರ್ಮಾನಿಸಿದ್ದರು. 1978ರಲ್ಲಿ ಮಹಾಬಲ ಭಟ್ಟರ ಸಹಕಾರದಲ್ಲಿ ಎರಡು ಎಕರೆ ಜಾಗ ಗುಡ್ಡ ದರ್ಖಾಸ್ಸು ರೂಪದಲ್ಲಿ ದೊರಕಿದೆ.ಈ ಭಾಗ ಬರಡು ಭೂಮಿಯಾಗಿದ್ದು, ಹುಲ್ಲು ಸಂಗ್ರಹಿಸಲು ಮಾತ್ರ ಈ ಜಾಗ ಉಪಯೋಗವಾಗುತ್ತಿತ್ತು. ನೀರಿ ಅಂಶವೂ ಕೂಡ ಇರಲಿಲ್ಲ. ಇಲ್ಲಿ ಕೃಷಿ ತೋಟ ಮಾಡುವುದು ಮಾತ್ರ ಅಸಾಧ್ಯವಾಗಿತ್ತು. ಆದರೂ ಛಲ ಬಿಡದ ನಾಯ್ಕರು ಅಲ್ಲಿಯೇ ಒಂದು ಗುಡಿಸಲು ಕಟ್ಟಿದರು. ಕುಡಿಯುವ ನೀರಿಗಾಗಿ ಪಕ್ಕದ ಮನೆಗೆ ತೆರಳುತ್ತಿದ್ದರು. ಬಾವಿ ತೋಡಲು ಅವರಲ್ಲಿ ಹಣವೂ ಇರಲಿಲ್ಲ. ಇದರಿಂದ ಚಿಂತಿತರಾದ ಅವರು ಸುರಂಗ ಕೊರೆಯುವ ಉಪಯ ಅವರಿಗೆ ಒಲಿದಿದೆ. ಇದಕ್ಕೆ ಪೂರ್ವ ಸಿದ್ಧತೆಯಾಗಿ ಮನೆಯ ಸಮೀಪ ಇಂಗುಗುಂಡಿ ನಿರ್ಮಿಸಿದ್ದರು. ಮಳೆಗಾಲದಲ್ಲಿ ಅಲ್ಲಿ ನೀರು ಸಂಗ್ರಹವಾಗುತ್ತಿತ್ತು. ಇದರಿಂದ ನೀರಿನ ಅಂತಾರ್ಜಲ ಮಟ್ಟ ಹೆಚ್ಚಾಗಿದೆ. ಅದಾದ ಬಳಿಕ ಅವರು ಕೂಲಿ ಕೆಲಸದ ನಡುವೆಯೂ ಅವರು ಸೊರಂಗ ಮಾರ್ಗ ಕೊರೆಯಲು ಮುಂದಾದರು. ಬಿಡುವಿನ ವೇಳೆ ನಿರಂತರವಾಗಿ ಸುರಂಗ ಕೊರೆಯಲು ಮುಂದಾದರು. ಮೊದಲಿಗೆ ಅವರು 30 ಮೀಟರ್ ಉದ್ದ ಸೊರಂಗ ಕೊರೆದರು. ಆದರೆ ನೀರು ಸಿಗಲಿಲ್ಲ. ಏಳನೇ ಸೊರಂಗ ಕೊರೆದಾಗ 30 ಮೀಟರ್ ಉದ್ದಕ್ಕೆ ಹೋದಾಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಬಳಿಕ ಅವರು 75 ಮೀ ವರೆಗೂ ಸೊರಂಗ ಕೊರೆದಾಗ ಅವರಿಗೆ ಸಾಕಾಗುವಷ್ಟು ನೀರು ಲಭಿಸಿದೆ. ಇದರಿಂದ ಅವರಿಗೆ ತೋಟ ಮಾಡುವ ಉದ್ದೇಶ ಈಡೇರಿಕೆಯಾಗಬಳಿಕ ಪಕ್ಕದಲ್ಲಿ ಮಣ್ಣಿನ ಟ್ಯಾಂಕ್ ಮಾಡಿ ನೀರು ಸಂಗ್ರಹ ಮಾಡುತ್ತಿದ್ದರು. ಬರಡು ಭೂಮಿಯನ್ನು ಫಲವತ್ತತೆ ಭೂಮಿಯನ್ನಾಗಿ ಮಾಡಬೇಕೆಂದು ತೀರ್ಮಾನಿಸಿದರು. ತನ್ನ ಒಂದೂವರೆ ಎಕರೆ ಜಾಗದಲ್ಲಿ ಅಡಿಕೆ, ಬಾಳೆ, ಕರಿಮೆಣಸು, ಮೊದಲಾದ ಕೃಷಿಯನ್ನು ನೆಟ್ಟರು. ಪಕ್ಕದಲ್ಲಿ ಕಾಡು ಹಾಗೂ ಗೇರು ಕೃಷಿ ಬೆಳೆಸಿದ್ದಾರೆ. ಅದರ ಜತೆಗೆ ಜೇನು ಕೃಷಿ ನಡೆಸುತ್ತಿದ್ದಾರೆ. ಇದು ಅವರಿಗೆ ಉತ್ತಮ ಫಲ ಕೊಡುತ್ತಿದೆ. ವರ್ಷವಿಡೀ ಅವರು ಸೊರಂಗದ ನೀರನ್ನು ಕೃಷಿಗೆ ಬಳಕೆ ಮಾಡುತ್ತಿದ್ದಾರೆ.

ತೋಟ ನಿರ್ಮಿಸಿದ್ದರೂ ತನ್ನ ಕೂಲಿ ಕೆಲಸ ಮಾಡುವುದನ್ನು ಮಾತ್ರ ಅವರು ನಿಲ್ಲಿಸಿರಲಿಲ್ಲ. ತೋಟದ ಪೋಷಣೆಯ ಜತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅವರಿಗೊಂದು ಆಘಾತ ಕಾಡಿತ್ತು. 15 ವರ್ಷಗಳ ಹಿಂದೆ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಿದ್ದ ವೇಳೆ ಮರದಿಂದ ಬಿದ್ದು ಗಂಭೀರ ಗಾಯಗೊಂಡಿತ್ತು. ತಾನು ದುಡಿದು ಸಂಪಾದಿಸಿದ ಹಣವೆಲ್ಲ ಚಿಕಿತ್ಸೆಗೆ ವೆಚ್ಚವಾಗಿದೆ. ತಾನು ಒಬ್ಬನೇ ಮರ ಹತ್ತಿ ಅಡಿಕೆ ಕೀಳುತ್ತಿದ್ದರು. ಅವರ ಪತ್ನಿ ಮತ್ತು ಮಕ್ಕಳು ಸಹಾಯ ಮಾಡುತ್ತಿದ್ದರು. ಪತ್ನಿ ತೋಟಕ್ಕೆ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದರು. ನಾಯ್ಕರು ಕೀಲಿದ ಅಡಿಕೆಯನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಇದೇ ರೀತಿಯಾಗಿ ಅವರ ಸಾಧನೆಗೆ ಪತ್ನಿಯೂ ಸಾಥ್ ನೀಡುತ್ತಿದ್ದಾರೆ.ಮಹಾಲಿಂಗ ನಾಯ್ಕರ ಸಾಧನೆಯನ್ನು ಗುರುತಿಸಿ ಅವರಿಗೆ ಮಂಗಳೂರು ಪ್ರೆಸ್ ಕ್ಲಬ್‌ನಿಂದ ವರ್ಷದ ಪ್ರಶಸ್ತಿ ಸಂದಿದೆ. ಪ್ರೋ. ಬಾಲಕೃಷ್ಣ ಗಟ್ಟಿ, ಡಾ. ವಸಂತಕುಮಾರ್ ಪೆರ್ಲ ಮತ್ತು ಡಾ. ನಾಗವೇಣಿ ಮಂಚಿ ನೇತೃತ್ವ ಆಯ್ಕೆ ಸಮಿತಿಯು 2018ನೇ ವರ್ಷದ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಅದಲ್ಲದೇ ಮರಾಟಿ ಸೇವಾ ಸಂಘದಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನಿಂದ ಸನ್ಮಾನಿಸಲಾಗಿದೆ. ವಾರಾಣಾಸಿ ಪ್ರತಿಷ್ಠಾನದ ವತಿಯಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೃಷಿ ಪಂಡಿತ ಪ್ರಶಸ್ತಿ ಲಭಿಸಿದೆ. ಇವರ ಸಾಧನೆಗೆ ಹ್ಯಾಟ್ಸಾಪ್ ಹೇಳಲೇ ಬೇಕು.

Related posts

Leave a Reply