Header Ads
Header Ads
Header Ads
Breaking News

ವಿಟ್ಲದಲ್ಲಿ ಈದ್ ಮಿಲನ್ ಕಾರ್ಯಕ್ರಮ ಬೊಬ್ಬೆಕ್ಕೇರಿ ಗಜಾನನ ಸಭಾಭವನದಲ್ಲಿ ಆಯೋಜನೆ

ಬಂಟ್ವಾಳ ತಾಲೂಕಿನ ವಿಟ್ಲ ರೋಟರಿ ಕ್ಲಬ್ ವತಿಯಿಂದ ಈದ್ ಮಿಲನ್” ಎಂಬ ಕಾರ್ಯಕ್ರಮವನ್ನು ಬೊಬ್ಬೆಕ್ಕೇರಿ ಗಜಾನನ ಸಭಾಭವನದಲ್ಲಿ ” ಆಯೋಜಿಸಲಾಗಿತ್ತು. ಈ ವೇಳೆ ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಹಬ್ಬಗಳು ಮನರಂಜನೆಗಳಿಗೆ ಸೀಮಿತವಾಗದೆ ಧಾರ್ಮಿಕ ಹಿನ್ನಲೆಯೊಂದಿಗೆ ಅರ್ಥಪೂರ್ಣವಾಗಿರಬೇಕು. ಪ್ರೀತಿ ವಿಶ್ವಾಸದಿಂದ ಪರಸ್ಪರ ಬೆರೆಯಬೇಕು. ಮನಸ್ಸುಗಳನ್ನು ಬೆಸೆಯಬೇಕು. ಇದರಿಂದ ಪರಸ್ಪರ ಪ್ರೀತಿ ವಿಶ್ವಾಸಗಳು ಹೆಚ್ಚುತ್ತದೆ ಎಂದು ಅವ್ರು ಹೇಳಿದರು.

ಈ ವೇಳೆ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಎಂ., ರೋಟರಿ ವಲಯ ಸೇನಾಧಿಕಾರಿ ಲಾರೆನ್ಸ್ ಗೋನ್ಸಾಲ್ವಿಸ್ ಪುತ್ತೂರು, ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply