Breaking News

ವಿಟ್ಲದಲ್ಲಿ ಕೆಸರ್‌ಡೊಂಜಿ ದಿನ, ಗುರು ದೇವಾನಂದ ಸ್ವಾಮೀಜಿಯಿಂದ ಉದ್ಘಾಟನೆ


ಜೀವನ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಯುವಶಕ್ತಿ ಸದ್ವಿನಿಯೋಗವಾಗಬೇಕು, ಗದ್ದೆ ಬೇಸಾಯ, ಕೃಷಿ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂತಹ ಕೂಟಗಳು ಪ್ರೇರಣೆಯಾಗಲಿ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು.
ಅವರು ವಿಟ್ಲದ ಇಟ್ಟೆಲ್ ತುಳುವೆರೆ ಕೂಟ ಆಶ್ರಯದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯ ಗದ್ದೆಯಲ್ಲಿ ನಡೆದ ಕೆಸರ್‌ಡೊಂಜಿ ದಿನೊ ಕೆಸರ್‌ದ ಕಂಡೊಂಡು ತುಳುನಾಡ್ದ ಗೊಬ್ಬುಲೆ ಪಂತೊ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯುವಕರಲ್ಲಿ ರಾಷ್ಟ್ರೋತ್ಥಾನದ ಧ್ಯೇಯೋದ್ದೇಶ, ಚಿಂತನೆ ಇದ್ದಾಗ ಸಮಾಜದಲ್ಲಿ ಉತ್ತಮ ಕಾರ್‍ಯ ಸಾಧನೆಯಾಗಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಹಿತವನ್ನುಂಟು ಮಾಡುವ, ಸಂತೋಷ ಕೊಡುವ ಕಾರ್‍ಯಕ್ರಮಗಳನ್ನು ನೀಡುವ ಸಂಘಟನೆಗಳು ನಮ್ಮ ಮಧ್ಯೆ ಉಳಿದು ಬೆಳೆಯುತ್ತವೆ ಎಂದರು. ಈ ವೇಳೆ ಕೆಸರು ಗದ್ದೆಯಲ್ಲಿ ಮೂರು ವಿಭಾಗಗಳಲ್ಲಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ತೆಂಗಿನಕಾಯಿ ಬಿಸಾಡುವುದು, ಮಡಕೆ ಒಡೆಯುವುದು, ದಂಪತಿಗಳಿಗೆ ಉಪ್ಪುಗೋಣಿ ಓಟ, ಹಾಳೆಯಲ್ಲಿ ಎಳೆಯುವ ಹಾಗೂ ಇನ್ನಿತರ ಸ್ಪರ್ಧೆಗಳು ನಡೆದವು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಸಾಮಾಜಿಕ ಕಾರ್‍ಯಕರ್ತ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ವಿಟ್ಲದ ಉದ್ಯಮಿ ಸುಬ್ರಾಯ ಪೈ, ಸತೀಶ್ ಕುಮಾರ್ ಆಳ್ವ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply