Header Ads
Breaking News

ವಿಟ್ಲದಲ್ಲಿ ಜನತಾ ಕರ್ಪ್ಯೂ ಗೆ ಬೆಂಬಲ

ವಿಟ್ಲದ ಎಲ್ಲಾ ಅಂಗಡಿ ಮುಗ್ಗಟ್ಟು ಬಂದ್ ಆಗಿದೆ. ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿ ಬಂದ್ ವೇಳೆ ಅಗತ್ಯ ವಸ್ತುಗಳಾದ ಮೆಡಿಕಲ್, ಹಾಲಿನ ಅಂಗಡಿ, ದಿನಪತ್ರಿಕೆಗಳ ಅಂಗಡಿಗಳು ಕಾರ್ಯಾಚರಿಸುತ್ತಿತ್ತು.

ಈ ಬಾರಿ ಅವರು ಕೂಡಾ ಬಂದ್ ಗೆ ಬೆಂಬಲ ನೀಡಿದ್ದಾರೆ. ಜನರು ಬೆಳಗ್ಗೆನಿಂದಲೇ ರಸ್ತೆಗೆ ಇಳಿಯಲಿಲ್ಲ. ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಎಲ್ಲಾ ಚೆಕ್‌ಪೋಸ್ಟ್ ಬಂದ್ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿಯೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ದಾರೆ. ಇನ್ನೂ ಮಂಗಳೂರು-ರಾಷ್ಟ್ರೀಯ ಹೆದ್ದಾರಿಯಾದ ಮಾಣಿ, ಬುಡೋಳಿ ಭಾಗದಲ್ಲಿ ಸಂಪೂರ್ಣ ಸ್ತಬ್ದವಾಗಿದೆ. ಹೆದ್ದಾರಿಗಳಲ್ಲಿಯೂ ವಾಹನ ಸಂಚಾರ ಸ್ಥಗಿತಗೊಂಡಿದೆ.

Related posts

Leave a Reply

Your email address will not be published. Required fields are marked *