Header Ads
Header Ads
Breaking News

ವಿಟ್ಲದಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಿಲ್ಲ

ಬೇಸಿಗೆ ಕಾಲದಲ್ಲಿ ಜನರು ನೀರಿಗೆ ಪರದಾಟ ನಡೆಸುತ್ತಾರೆ. ಟ್ಯಾಂಕರ್‌ಗಳಲ್ಲಿಯೂ ನೀರು ಪೂರೈಕೆ ಕೂಡ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಬರಲ್ಲ. ವಿಟ್ಲದ ಒಂದು ಭಾಗದಲ್ಲಿ ಮಾತ್ರ ಮಳೆಗಾಲದಲ್ಲಿ ಸಾಕಷ್ಟು ನೀರಿದ್ದರೂ ಕುಡಿಯಲು ಮಾತ್ರ ಆಗುತ್ತಿಲ್ಲ. ಇಷ್ಟಕ್ಕೂ ಕಾರಣವೇನು ಅಂತೀರಾ ಈ ಸ್ಟೋರಿ ನೋಡಿ…ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರ್ನಮಿಗುಡ್ಡೆ-ನೀರಕಣಿ ಎಂಬಲ್ಲಿ ಚರಂಡಿಯಲ್ಲಿ ಹರಿಯುವ ಕೊಳಚೆ ನೀರು ಹಾಗೂ ಮಳೆ ನೀರು ಪಕ್ಕದಲ್ಲಿರುವ ಕೊಳವೆ ಬಾವಿಯನ್ನು ಸೇರುತ್ತಿದೆ. ಇದರಿಂದ ಈ ಭಾಗದ ಇಪ್ಪತ್ತಕ್ಕಿಂತಲೂ ಅಧಿಕ ಮನೆಗಳಲ್ಲಿ ಕಲುಷಿತ ನೀರು ಪತ್ತೆಯಾಗಿದೆ. ಒಂದು ವರ್ಷದ ಹಿಂದೆ ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಈ ಭಾಗದ ಜನರ ಬವಣೆ ಮನಗಂಡ ಪಂಚಾಯತ್ ಕೊಳವೆ ಬಾವಿಯನ್ನು ಕೊರೆಸಿತ್ತು. ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಜನರಿಗೆ ಇದೇ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಮಳೆಗಾಲ ಬರುತ್ತಿದ್ದಂತೆ ಮಾರ್ನಮಿಗೆಡ್ಡೆಯಿಂದ ನೀರಕಣಿ ವರೆಗೆ ಸಾಗುವ ರಸ್ತೆ ಬದಿಯಲ್ಲಿ ಚರಂಡಿಯಿದ್ದು, ಸುತ್ತಮುತ್ತಲಿನ ಕಲುಷಿತ ನೀರು ಮಳೆ ನೀರಿನ ಜತೆ ಮಿಶ್ರಣಗೊಂಡು ಚರಂಡಿ ಬದಿಯಲ್ಲಿರುವ ಕೊಳವೆ ಬಾವಿಯನ್ನು ಸೇರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
 ಚರಂಡಿಯ ಬದಿಯಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ಅದು ಕೆಳಭಾಗದಲ್ಲಿ ಇರುವುದರಿಂದ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಕಲುಷಿತ ನೀರಿನ ಜತೆಗೆ ನೀರು ದುರ್ನತ ಬೀರುತ್ತಿದೆ. ಈ ನೀರು ಕುಡಿಯಲು ಬಿಡಿ ಸ್ನಾನ ಮಾಡಲು ಕೂಡ ಸಾಧ್ಯವಿಲ್ಲ. ಈ ಬಗ್ಗೆ ಸ್ಥಳೀಯರು ವಿಟ್ಲ ಪಟ್ಟಣ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ. ಇದರಿಂದ ಎಚ್ಚೆತ್ತ ಪಟ್ಟಣ ಪಂಚಾಯಿತಿ ಚರಂಡಿಯಲ್ಲಿ ಇದ್ದಂತ ಕಸಕಡ್ಡಿಗಳನ್ನು ತೆರವು ಮಾಡಿ ಸಾರಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಆದರೆ ಜೋರಾದ ಮಳೆ ಬಂದಾಗ ನೀರಿನ ಹರಿವು ಹೆಚ್ಚಾಗಿ ಕೊಳವೆ ಬಾವಿಯನ್ನು ಸೇರುತ್ತಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕೊಳವೆ ಬಾವಿ ಕೊರೆದ ಸಂದರ್ಭ ಚೇಸಿಂಗ್ ಪೈಪನ್ನು ಎತ್ತರಕ್ಕೆ ಅಳವಡಿಸಲಾಗಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಸಾರ್ವಜನಿಕರ ಒತ್ತಾಯದ ಮೇರೆಗೆ ಚೇಸಿಂಗ್ ಪೈಪನ್ನು ತಗ್ಗಿಸಲಾಗಿದೆ. ಇದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಈ ಕೊಳವೆ ಬಾವಿಯಲ್ಲಿ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಯಾಗುತ್ತದೆ. ಮಳೆ ಪ್ರಾರಂಭವಾದಗಿನಿಂದ ನೀರಿನಲ್ಲಿ ದುರ್ನತ ಬೀರುತ್ತಿದೆ. ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಕಲುಷಿತ ನೀರು ಕುಡಿದು ಜನರು ರೋಗದ ಭೀತಿ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Related posts

Leave a Reply