Header Ads
Header Ads
Header Ads
Breaking News

ವಿಟ್ಲದಲ್ಲಿ ನೀವು ಎಲ್ಲೆಲ್ಲಿ ಗಾಡಿ ನಿಲ್ಲಿಸುವಂತಿಲ್ಲ ಜಿಲ್ಲಾಧಿಕಾರಿ ಆದೇಶ ಪಾಲಿಸಲು ಮುಂದಾದ ಪ.ಪಂ.

ಇನ್ನೂ ವಿಟ್ಲ ಪೇಟೆಯ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದರೆ ತಕ್ಷಣವೇ ಬೀಳಲಿದೆ ದಂಡ, ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಕೊನೆಗೂ ವಿಟ್ಲ ಪಟ್ಟಣ ಪಂಚಾಯತ್ ಪಾಲಿಸಲು ಮುಂದಾಗಿದೆ.
ಹಿಂದೆ ಇಬ್ರಾಹಿಂ ಜಿಲ್ಲಾಧಿಕಾರಿಯಾಗಿದ್ದಾಗ ಸ್ವತಃ ಅವರೇ ವಿಟ್ಲ ಪೇಟೆಗೆ ಆಗಮಿಸಿ ಪರಿಶೀಲಿಸಿ ನೋ ಪಾರ್ಕಿಂಗ್ ಸ್ಥಳವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಪೊಲೀಸ್ ಇಲಾಖೆ ಅದನ್ನು ಒಪ್ಪಿತ್ತು. ಮತ್ತು ಪೊಲೀಸ್ ಇಲಾಖೆಯ ಉಸ್ತುವಾರಿಯಲ್ಲೇ ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳಿಗೆ ಪ್ಲೆಕ್ಸ್ ಅಳವಡಿಸಲಾಗಿತ್ತು.
ಗ್ರಾ.ಪಂ. ಅಧಿಕಾರದಲ್ಲಿದ್ದಾಗಲೇ ವಾಹನ ನಿಲುಗಡೆ ಗೊಂದಲವನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ ನಿಯಂತ್ರಿಸುವವರಿರಲಿಲ್ಲ. ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದ್ದುದು ಒಂದು ಕಾರಣ. ಸಂಚಾರ ಪೊಲೀಸ್ ವ್ಯವಸ್ಥೆ ವಿಟ್ಲದಲ್ಲಿಲ್ಲ. ಬಂಟ್ವಾಳದಲ್ಲಿ ಸಂಚಾರ ಪೊಲೀಸರಿದ್ದರೂ ವಿಟ್ಲದ ವ್ಯಾಪ್ತಿಗೆ ಅದು ಸಿಗಲಿಲ್ಲ. ಇದೆಲ್ಲ ಕಾರಣಗಳಿಂದ ಈ ವ್ಯವಸ್ಥೆ ನಿಧಾನಗತಿಯಲ್ಲೇ ಸಾಗಿತ್ತು.
ಈ ಹಿಂದೆ ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ, ಪೊಲೀಸರು ದಂಡ ವಿಧಿಸುವ ವೇಳೆ ನೋ ಪಾರ್ಕಿಂಗ್ ನಾಮಫಲಕವಿಲ್ಲ ಎಂದು ದೂರಿ ಜಾರಿಕೊಳ್ಳುತ್ತಿದ್ದರು. ಇದೀಗ ಪಟ್ಟಣ ಪಂಚಾಯಿತಿ ಜಿಲ್ಲಾಧಿಕಾರಿಗಳು ನೋ ಪಾರ್ಕಿಂಗ್ ಸ್ಥಳವೆಂದು ಘೋಷಣೆ ಮಾಡಿದ ಸ್ಥಳದಲ್ಲಿ ನೋ ಪಾರ್ಕಿಂಗ್ ನಾಮಫಲಕ ಅಳವಡಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಜಾಗದಲ್ಲಿ ವಾಹನ ನಿಲ್ಲಿಸಿ, ರಸ್ತೆ ಸಂಚಾರಕ್ಕೆ ತೊಂದರೆ ಮಾಡುವ ವಾಹನ ಮೇಲೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ಸಿಯಾಗುತ್ತದೆ ಎಂಬುದನ್ನು ಕಾದುನೋಡಬೇಕು….

Related posts

Leave a Reply