Header Ads
Header Ads
Breaking News

ವಿಟ್ಲದಲ್ಲಿ ಬೆಂಕಿಗಾಹುತಿಯಾದ ಅಂಗಡಿ: ಸುಟ್ಟು ಕರಕಲಾದ ವಸ್ತುಗಳು

ವಿಟ್ಲ: ಶಾರ್ಟ್ ಸರ್ಕಿಟ್‍ನಿಂದ ಇಲೆಕ್ಟ್ರಾನಿಕ್ಸ್ ಅಂಗಡಿ ಬೆಂಕಿ ತಗುಲಿ ಅಂಗಡಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮದ ಶಾಂತಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ ಎಂಬವರಿಗೆ ಸೇರಿದ ಡಿಲೆಕ್ಸ್ ಎಂಬ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಅಂಗಡಿ ಕುಡ್ತಮುಗೇರು ಎಂಬಲ್ಲಿ ಕಾರ್ಯಾಚರಿಸುತ್ತಿದೆ.

ಸೋಮವಾರ ಸಂಜೆ ಮಾಲೀಕ ಹೊರಗಡೆ ತೆರಳಿದ್ದ ವೇಳೆ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ತಗುಲಿದೆ. ಇದರಿಂದ ಅಂಗಡಿಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು, ಬೆಳೆಬಾಳುವ ಉಪಕರಣಗಳಾದ ಕಂಪ್ಯೂಟರ್, ಫರ್ನಿಚರ್ ಮೊದಲಾದ ವಸ್ತುಗಳು ಸಂಪೂರ್ಣವಾಗಿ ಭಸ್ಮಗೊಂಡಿದೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

Leave a Reply