Header Ads
Header Ads
Breaking News

ವಿಟ್ಲದಲ್ಲಿ 58ನೇ ರಕ್ತದಾನ ಶಿಬಿರ : ಬೋಳಂತೂರಿನ ಎನ್.ಸಿ ರೋಡ್‌ನಲ್ಲಿ ನಡೆದ ಕಾರ್ಯಕ್ರಮ

ವಿಟ್ಲ: ಎಸ್‌ಎಸ್‌ಎಫ್ ಕಲ್ಲಡ್ಕ ಸೆಕ್ಟರ್, ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ಎಸ್‌ಎಸ್‌ಎಫ್ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ೫೮ನೇ ರಕ್ತದಾನ ಶಿಬಿರ ವಿಟ್ಲ ಸಮೀಪದ ಬೋಳಂತೂರು ಎನ್.ಸಿ ರೋಡ್‌ನಲ್ಲಿ ನಡೆಯಿತು.

ಎಸ್‌ಎಸ್‌ಎಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ಅವರು ವಿ4 ನೊಂದಿಗೆ ಮಾತನಾಡಿ ಎಸ್‌ಎಸ್‌ಎಫ್ ಸಂಘಟನೆ ಸಾಮಾಜಿಕ ಜಾಗೃತಿ ಮೂಡಿಸುವ ಸಂಘಟನೆಯಾಗಿದೆ. ಕೋಮುವಾದ-ಉಗ್ರವಾದದ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ಎಸ್‌ಎಸ್‌ಎಫ್ ಸಂಘಟನೆ ನಿರಂತರವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡು ಬರುತ್ತಿದೆ. ರಕ್ತ ಸಂಗ್ರಹಿಸಿ ರೋಗಿಗಳಿಗೆ ಸೂಕ್ತ ಸಮಯದಲ್ಲಿ ತಲುಪಿಸಲಾಗುತ್ತಿದೆ. ನೆಲ್ಯಾಡಿ, ಪುತ್ತೂರು ಮೊದಲಾದ ಕಡೆಗಳಲ್ಲಿ ಇದೇ ರೀತಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. 3472 ಬಾಟಲ್ ರಕ್ತ ಸಂಗ್ರಹ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿರುವ ಸರ್ವಧರ್ಮದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದುವಾಃ ಆಶೀರ್ವಚನ ನೀಡಿದರು. ಮುಶ್ತಕುರ್ರಹ್ಮಾನ್ ತಂಙಳ್ ಚಟ್ಟೆಕಲ್ಲು ಉದ್ಘಾಟಿಸಿದರು. ಎಸ್‌ಎಸ್‌ಎಫ್ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ದಾರುಲ್ ಅಶ್ ಅರಿಯ್ಯದ ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ ಪ್ರಭಾಷಣ ಮಾಡಿದರು.

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಕ್ತವನ್ನು ಶೇಖರಣೆ ಮಾಡುವ ಶಕ್ತಿ ಇರುವುದು ಮನುಷ್ಯರಿಗೆ ಮಾತ್ರ ಸಾಧ್ಯವಿದೆ. ರಕ್ತದಾನ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಅದು ಒಂದು ಜೀವವನ್ನು ರಕ್ಷಿಸಲು ಸಾಧ್ಯವಿದೆ. ಎಸ್‌ಎಸ್‌ಎಫ್ ದಾಖಲೆ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮದರಸದಲ್ಲಿ ಸೇವೆ ಸಲ್ಲಿಸಿದ ಅಲ್‌ಹಾಜ್ ಸುಲೈಮಾನ್ ಮುಸ್ಲಿಯಾರ್ ನಾರ್ಶ, 50 ಬಾರಿಗಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದ ಕೃಷ್ಣಪ್ಪ ಕೊಕ್ಕಪುಣಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಇಸ್ಮಾಯಿಲ್ ಬಬ್ಬುಕಟ್ಟೆ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಸುಲೈಮಾನ್ ಮುಸ್ಲಿಯಾರ್, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಮುತ್ತಲಿಬ್ ನಾರ್ಶ, ಚಂದ್ರಶೇಖರ ರೈ ಬೋಳಂತೂರು, ಅಬ್ದುಲ್ ಹಮೀದ್ ಮದನಿ, ಎಸ್.ಎಂ ಅಬೂಬಕ್ಕರ್, ಅಬ್ದುಲ್ ರಶೀದ್ ಹಾಜಿ ವಗ್ಗ, ಅಬೀದ್ ನಈಮಿ, ಅಕ್ಬರ್ ಅಲಿ ಮದನಿ, ಹಾರೀಸ್ ಪೆರಿಯಪಾದೆ, ಅಲಿ ಮದನಿ, ಇಬ್ರಾಹಿಂ ಕರೀಂ ಕದ್ಕರ್, ಅಬ್ದುಲ್ ಹಮೀದ್ ಮುಸ್ಲಿಯಾರ್, ಮುಸ್ತಫಾ ಕೋಡಪದವು, ಖಾದರ್ ಸಖಾಫಿ, ಅಬ್ಬಾಸ್ ಮುಸ್ಲಿಯಾರ್, ಜಯರಾಜ್, ರಫೀಕ್ ಮಾಡದ ಬಳಿ, ಸಿ.ಎಚ್ ರಝಾಕ್, ದಾವೂದ್, ಇಲ್ಯಾಸ್, ವಾಜೀದ್ ಹನೀಫಿ, ಜಬ್ಬಾರ್ ಕಣ್ಣೂರು, ಖಾದರ್ ಕೊಕ್ಕಪುಣಿ, ಅಬ್ದುಲ್ಲ ನಾರಂಕೋಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *