Header Ads
Header Ads
Header Ads
Breaking News

ವಿಟ್ಲದಲ್ಲಿ 94ಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಸಿದ್ದರಾಮಯ್ಯ ಸರ್ಕಾರ ಬಡವರ ಸರ್ಕಾರವಾಗಿದೆ ಸಚಿವ ರಮಾನಾಥ ರೈ ಹೇಳಿಕೆ

 

ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರ ಬಡವರ ಭಾಗ್ಯಜ್ಯೋತಿ ವಿದ್ಯುತ್ ಬಿಲ್ ಪಾವತಿಸಲಾಗದಿದ್ದ ಬಡಕುಟುಂಬದ ಬಿಲ್ ಪಾವತಿಸಿದೆ. ಹೈನುಗಾರರಿಗೆ ಪ್ರತಿ ಲೀಟರಿಗೆ 5 ರೂ. ಪ್ರೋತ್ಸಾಹಧನ ನೀಡಿದೆ. ರೈತರಿಗೆ ಬಡ್ಡಿರಹಿತ ಸಾಲ ನೀಡಿದೆ. ವಿದ್ಯಾಭ್ಯಾಸಕ್ಕೆ ಸಹಾಯ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ವಿಟ್ಲದ ವೀರಕಂಭ ಗ್ರಾ.ಪಂ.ಸಭಾಭವನದಲ್ಲಿ 326 ಮಂದಿ ಗ್ರಾಮಸ್ಥರಿಗೆ 94ಸಿ ಹಕ್ಕುಪತ್ರ ವಿತರಿಸಿ, ಮಾತನಾಡಿದರು.
ಹಿಂದೆ ಗ್ರಾಮದಲ್ಲಿ 15 ಮಂದಿ ಭೂಮಿಯ ಒಡೆಯರಾಗಿದ್ದರೆ ಇಂದು 2500 ಮಂದಿ ಭೂಮಿಯ ಒಡೆಯರಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 17 ಸಾವಿರ ಮಂದಿಗೆ 94ಸಿ ಹಕ್ಕುಪತ್ರ ವಿತರಿಸಲಾಗಿದೆ. ಇದು ರಾಜ್ಯದಲ್ಲೇ ದಾಖಲೆಯಾಗಿದೆ. ಅನಿಲಭಾಗ್ಯ ಯೋಜನೆಯ ಮೂಲಕ ಬಡವರಿಗೆ ಗ್ಯಾಸ್ ವಿತರಿಸಿದೆ. ಆರೋಗ್ಯಭಾಗ್ಯ ಕಾರ್ಡ್ ಯೋಜನೆ ರಾಜ್ಯದಲ್ಲಿ ಶೀಘ್ರವಾಗಿ ಜಾರಿಗೆ ಬರಲಿದೆ. ಸಂಪುಟದ ಅನುಮೋದನೆ ಪಡೆಯಲು ಬಾಕಿಯಿದೆ. ಈ ಯೋಜನೆ ಪ್ರತಿಯೊಬ್ಬ ನಾಗರಿಕರ ಆರೋಗ್ಯ ರಕ್ಷಣೆಗಾಗಿದೆ ಎಂದು ಹೇಳಿದರು.

13 ಮಂದಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, 16 ಮಂದಿಗೆ ಪಿಂಚಣಿ ಚೆಕ್ ವಿತರಿಸಲಾಯಿತು. ಇದೇ ಸಂದರ್ಭ ಅತೀ ಹೆಚ್ಚು ಹಕ್ಕುಪತ್ರಗಳನ್ನು ನೀಡಲು ಕಾರಣರಾದ ಗ್ರಾಮಕರಣಿಕ ಕರಿಬಸಪ್ಪ ಅವರನ್ನು ಸಚಿವರು ಸಮ್ಮಾನಿಸಿದರು.

ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್‌ಆಲಿ, ಜಿಲ್ಲಾ ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ವೀರಕಂಭ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ನಿಶಾಂತ್ ರೈ, ಕಂದಾಯ ನಿರೀಕ್ಷಕ ದಿವಾಕರ್ , ಸದಸ್ಯರಾದ ದೇವದಾಸ ರೈ, ಅಬ್ಬಾಸ್ ವಿ.ಕೆ., ಜನಾರ್ದನ ಬಾಯಿಲ, ರಾಮಚಂದ್ರ ಪ್ರಭು, ಉಬೇದ್, ಪಿಡಿ‌ಒ ಗಿರಿಜ, ನೌಫಲ್ ಕುಡ್ತಮುಗೇರು ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply