Header Ads
Header Ads
Breaking News

ವಿಟ್ಲದ ಆರ್.ಕೆ ಆರ್ಟ್ಸ್ ಸಹಕಾರದಲ್ಲಿ ಆಟಿಡೊಂಜಿ ಕೂಟ ತುಳುನಾಡು ಎಂದರೆ ಸಂಸ್ಕೃತಿ ಮಹೇಂದ್ರನಾಥ್ ಸಾಲೆತ್ತೂರು ಹೇಳಿಕೆ

 

ವಿಟ್ಲ: ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ವಿಟ್ಲದ ಆರ್.ಕೆ ಆರ್ಟ್ಸ್ ಸಹಕಾರದಲ್ಲಿ ಆಟಿಡೊಂಜಿ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ತುಳು ಒರಿಪುಗ ಇದರ ಮುಖ್ಯಸ್ಥರಾದ ಮಹೇಂದ್ರನಾಥ ಸಾಲೆತ್ತೂರು ಉದ್ಘಾಟಿಸಿ ಮಾತನಾಡಿ ತುಳುನಾಡು ಎಂದರೆ ಅದು ಸಂಸ್ಕೃತಿಯಾಗಿದೆ. ತುಳುನಾಡಿನ ಸಂಸ್ಕೃತಿ ನಾಶವಾಗಲು ನಾವೇ ಕಾರಣವಾಗುತ್ತಿದ್ದೇವೆ. ತುಳು ಭಾಷೆ ಮಾತನಾಡಲು ತಾತ್ಸಾರ ಉಂಟಾಗುವ ಪರಿಸ್ಥಿತಿ ಎದುರಾಗಿದೆ. ಪ್ರತಿಗ್ರಾಮದಲ್ಲಿ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ತುಳುನಾಡು ಹಾಗೂ ತುಳು ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯಬೇಕು. ತುಳುನಾಡಿನ ಆಹಾರ ಪದ್ಧತಿಯಲ್ಲಿಯೂ ವಿಶಿಷ್ಟ ಗುಣವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಕತ್ವದಲ್ಲಿ ಆರ್.ಕೆ ಆರ್ಟ್ಸ್‌ನ ಚಿಣ್ಣರ ಮನೆಯ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯನ್ನು ತುಳುನಾಡಿನ ಸೊಬಗನ್ನು ಎತ್ತಿ ತೋರಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು.

ಇತ್ತೀಚೆಗೆ ಕೆಸಡೊಂಜಿ ದಿನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿದ್ದ ಬಸವನಗುಡಿ ರಾಮಣ್ಣ ಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಎಸ್‌ಡಿ‌ಎಂಸಿ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್ ಅರಮನೆ, ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ನಾಮನಿರ್ದೇಶಕ ಸದಸ್ಯ ಶಮೀರ್ ಪಳಿಕೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವಿಪ್ರಸಾದ್, ಮುಖ್ಯೋಪಾಧ್ಯಾಯ ವಿಶ್ವನಾಥ ಕುಳಾಲು, ಶಿಕ್ಷಕಿ ರಮಾ, ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply