Header Ads
Breaking News

ವಿಟ್ಲದ ಒಡಿಯೂರು ಗುರುದೇವಾದತ್ತ ಸಂಸ್ಥಾನ : ವಿಜೃಂಭಣೆಯಿಂದ ನಡೆದ ಒಡಿಯೂರು ರಥೋತ್ಸವ

ವಿಟ್ಲ: ಒಡಿಯೂರು ಗುರುದೇವದತ್ತ ಸಂಸ್ಥಾನದ ವತಿಯಿಂದ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತಾಂಜನೇಯ ದೇವರ ಶ್ರೀ ಒಡಿಯೂರು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಶ್ರೀ ದತ್ತಾಂಜನೇಯ ದೇವರ ರಥವು ಒಡಿಯೂರು ಸಂಸ್ಥಾನದಿಂದ ನವರತ್ನ ಸ್ವರ್ಣಪಾದುಕೆಗಳೊಂದಿಗೆ ಗ್ರಾಮ ದೈವಸ್ಥಾನ ಮಿತ್ತನಡ್ಕ ತೆರಳಿ, ಕನ್ಯಾನ ಪೇಟೆ ಸವಾರಿಯಾಗಿ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಒಡಿಯೂರು ಸಂಸ್ಥಾನಕ್ಕೆ ಹಿಂತಿರುಗಿದೆ. ಈ ಅದ್ಧೂರಿ ರಥಯಾತ್ರೆವು ಕನ್ಯಾನ-ಕರೋಪಾಡಿ ಎರಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ 12 ಕಿ.ಮೀ ಸಂಚರಿಸಿದೆ. ಭವ್ಯ ಶೋಭಾಯಾತ್ರೆಯಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ, ರಾಮಾಯಣ ಕಥೆಗಳ ವಿವಿಧ ಸನ್ನಿವೇಶಗಳನ್ನು ತೋರಿಸುವ ವಿವಿಧ ಸ್ಥಬ್ಧ ಚಿತ್ರಗಳು ಗಮನ ಸೆಳೆಯಿತು. ಕೀಲು ಗೊಂಬೆ, ಭಜನಾ ತಂಡಗಳು ತಾಲೀಮು ಪ್ರದರ್ಶನ, ಸಿಡಿಮದ್ದು ಪ್ರದರ್ಶನ, ಗೊಂಬೆ ಬಳಗ, ಚಿಂಗಾರಿ ಮೇಳ, ಚೆಂಡೆಮೇಳಗಳೊಂದಿಗೆ ವೈಭವೋಪೇತ ಶೋಭಾಯಾತ್ರೆ ಗಮನ ಸೆಳೆಯಿತು. ವಿವಿಧ ಸ್ಥಬ್ಧ ಚಿತ್ರಗಳು ನಗ್ರಿಗುತ್ತು ರೋಹಿತ್ ಡಿ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮುಂಬೈ ವಜ್ರಮಾತಾ ವಿಕಾಸ ಕೇಂದ್ರ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ, ಒಡಿಯೂರು ಗುರುದೇವ ಸೇವಾ ಬಳಗ ಒಡಿಯೂರು ಪ್ರಯೋಜಕತ್ವದಲ್ಲಿ ಮೂಡಿ ಬಂತು. ಶ್ರೀ ದತ್ತಾಂಜನೇಯ ದೇವರ ವೈಭವೋಪೇತ 12 ಕಿ.ಮೀ. ರಥಯಾತ್ರೆ ಕಣ್ಣಿಗೆ ಹಬ್ಬವಾಗಿ ಜನಮನವನ್ನು ಆಕರ್ಷಿಸುವ ಉತ್ಸವವಾಗಿ ಮೂಡಿಬಂತು.

ಈ ಸಂದರ್ಭ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿ ಮಿತ್ತನಡ್ಕ ಇವರ ಪ್ರಾಯೋಜಕತ್ವದಲ್ಲಿ ಸಿಂಚನ ಮ್ಯೂಸಿಕಲ್ಸ್ ಪೆರ್ಲ ಇವರಿಂದ ಭಕ್ತಿ ರಸಮಂಜರಿ ಹಾಗೂ ಪುಟಾಣಿಗಳಿಂದ ನೃತ್ಯ ವೈವಿಧ್ಯ. ಕಮ್ಮಾಜೆಯಲ್ಲಿ ಅಮ್ಮ ಗ್ರೂಪ್ಸ್‍ನ ವತಿಯಿಂದ ಸಾಂಸ್ಕøತಿಕ ವೈವಿಧ್ಯ. ಕನ್ಯಾನದಲ್ಲಿ ಶ್ರೀಧರ ಶೆಟ್ಟಿ ಗುಬ್ಯಮೇಗಿನಗುತ್ತು ಅವರ ಪ್ರಾಯೋಜಕತ್ವದಲ್ಲಿ ಶಿವಂ ಡ್ಯಾನ್ಸ್ ಅಕಾಡೆಮಿ, ವಿಟ್ಲ ಇವರಿಂದ ಸಾಂಸ್ಕøತಿಕ ವೈವಿಧ್ಯ ನಡೆಯಿತು.

ಕ್ಷೇತ್ರದ ಶ್ರೀ ಸಾಧ್ವೀ ಮಾತಾನಂದ ಮಯೀ ದಿವ್ಯ ಉಪಸ್ಥಿತಿ ಕರುಣಿಸಿದ್ದರು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮುಂಬೈ ವಜ್ರಮಾತಾ ವಿಕಾಸ ಕೇಂದ್ರ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ, ಒಡಿಯೂರು ಗುರುದೇವ ಸೇವಾ ಬಳಗ, ಗ್ರಾಮ ವಿಕಾಸ ಯೋಜನೆ ಮೊದಲಾದ ಬಳಗದ ಪದಾಧಿಕಾರಿಗಳು ಸದಸ್ಯ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *