Header Ads
Header Ads
Breaking News

ವಿಟ್ಲದ ಕಳಂಜಿಮೆಲೆ ರಕ್ಷಿತಾರಣ್ಯದಲ್ಲಿ ಆಕಸ್ಮಿಕ ಬೆಂಕಿ ಬೆಲೆಬಾಳುವ ಮರಗಳು ಬೆಂಕಿಗಾಹುತಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ

ವಿಟ್ಲದ ಕನ್ಯಾನ ಗ್ರಾಮದ ಕಳಂಜಿ ಮಲೆ ರಕ್ಷಿತಾರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು ಅಂದಾಜು 10 ಎಕರೆಯಷ್ಟು ಜಾಗದಲ್ಲಿದ್ದ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಕನ್ಯಾದದ ಕಳಂಜಿ ಮಲೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡ್ಗಿಚ್ಚಿನಂತೆ ಹರಡಿ ಭಾಗಶ ಸುಟ್ಟು ಹೋಗಿದೆ. ಬಂಟ್ವಾಳದಿಂದ ಅಗ್ನಿಶಾಮಕ ದಳ ಆಗಮಿಸಿದ್ದರೂ ಬೆಂಕಿ ತೀವ್ರತೆ ಹೆಚ್ಚಾಗಿದ್ದರಿಂದ ತಡರಾತ್ರಿ ವರೆಗೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕದಳದ ವಾಹನದಲ್ಲಿ ನೀರು ಖಾಲಿ ಆಗಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ 200 ಕ್ಕಿಂತಲೂ ಅಧಿಕ ಯುವಕರು ಬೆಂಕಿ ನಂದಿಸಲು ಕೈ ಜೋಡಿಸಿ, ಸ್ಥಳೀಯದಿಂದ ನೀರು ಸಂಗ್ರಹಿಸಿ ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts