Header Ads
Header Ads
Breaking News

ವಿಟ್ಲದ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ವಾಹನ ಜಾಥಾದ ಮೂಲಕ ಗ್ರಾಮಜ್ಯೋತಿ ಆಗಮನ

ವಿಟ್ಲ: ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ವಿಟ್ಲಮುಡ್ನೂರು-ಕುಳ ಗ್ರಾಮದ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹಾಗೂ ಶಿಬರಿಕಲ್ಲು ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ “ಗ್ರಾಮಜ್ಯೋತಿ”ಯು ವಿಟ್ಲ ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ವಾಹನ ಜಾಥದ ಮೂಲಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ  ಆಗಮಿಸಿದೆ.

ಗ್ರಾಮಜ್ಯೋತಿ ದೇಗುಲಕ್ಕೆ ಆಗಮಿಸಿದ ಬಳಿಕ ದೇವರಿಗೆ ಮಹಾಪೂಜೆ ನಡೆದು, ಬ್ರಹ್ಮಕಲಶೋತ್ಸವ ನಿಮಿತ್ತ ಮುಂದಿನ 48 ದಿನಗಳ ಕಾಲ ಗ್ರಾಮಸ್ಥರೆಲ್ಲರೂ ವ್ರತ ನಿಷ್ಠರಾಗಿರುವುದೆಂದು ಸಂಕಲ್ಪ ಮಾಡಲಾಯಿತು.ಬಳಿಕಚಪ್ಪರ ಮುಹೂರ್ತ ಕಾರ್ಯವು ಶುಭ ಮುಹೂರ್ತದಲ್ಲಿ ನೆರವೇರಿತು.

ಈ ಕಾರ್ಯಕ್ರಮಕ್ಕೆ  ವಿಟ್ಲಮುಡ್ನೂರು ಪಂಚಾಯಿತಿ  ಅಧ್ಯಕ್ಷೆ ಪ್ರೇಮಲತಾ ಪಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ ವಿಟ್ಲ, ಜಯರಾಮ ಬಲ್ಲಾಲರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ  ಕೆ.ಟಿ ವೆಂಕಟೇಶ್ವರ ನೂಜಿ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Related posts

Leave a Reply