Header Ads
Header Ads
Header Ads
Breaking News

ವಿಟ್ಲದ ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವರ ಆದಿಸ್ಥಳ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮ

ವಿಟ್ಲದ ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವರ ಆದಿಸ್ಥಳ – ಬದಿಕೆರೆ ಸಾನಿಧ್ಯದಲ್ಲಿ ಜಲರೂಪಿ ಶ್ರೀ ಮಹಾವಿಷ್ಣು – ಶ್ರೀ ಗಂಗಾದೇವಿ ಮತ್ತು ನಾಗದೇವರ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಿತು.

ವೇದ ಮೂರ್ತಿ ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹವನ, ಜಲರೂಪಿ ಶ್ರೀ ಮಹಾವಿಷ್ಣು – ಶ್ರೀ ಗಂಗಾದೇವಿ ಮತ್ತು ನಾಗದೇವರ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸಪರಮಹಂಸ ಸ್ವಾಮೀಜಿ ಅವರು ಹಿಂದೂ ಧರ್ಮದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹೋದರೆ ಅದು ನಮ್ಮನ್ನು ಉಳಿಸುತ್ತದೆ. ಸಮಾಜದಲ್ಲಿರುವ ಋಣಾತ್ಮಕ ಅಂಶಗಳು ಧಾಮಿಕತೆಯ ಮೂಲಕ ಪರಿವರ್ತನೆಯಾಗುತ್ತದೆ. ಸಮಾಜ ಹಾಳಾಗಿಲ್ಲ, ಅದನ್ನು ನೋಡುವ ನಮ್ಮ ಮನೋಭಾವ ಬದಲಾಗಬೇಕು. ದೇವರ ಮುಂದೆ ನಾವೆಲ್ಲರೂ ಸೇವಕರಾಗಿ ಇರುವುದರಲ್ಲಿ ಸಂತೃಪ್ತತೆ ಇದೆ ಎಂದು ಹೇಳಿದರು.

ವಿಟ್ಲ ಅರಮನೆಯ ಜನಾರ್ಧನ ವರ್ಮ ಅರಸರು ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪಾಂಡೇಲುಗುತ್ತು, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ, ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಪಿಲಿಂಜ ಉಪಸ್ಥಿತರಿದ್ದರು.

Related posts

Leave a Reply