Header Ads
Header Ads
Breaking News

ವಿಟ್ಲದ ಪದ್ಮಗಿರಿಯಲ್ಲಿ ನಿರ್ಮಾಣವಾಗುತ್ತರುವ ಧ್ವನ್ವಂತರಿ ಕ್ಷೇತ್ರ ಮಾ.11ರಂದು ಅಳಿಕೆಯ ಪದ್ಮಗಿರಿಯಲ್ಲಿ ದೇವರ ವಿಗ್ರಹದ ಮೆರವಣಿಗೆ ಪ್ರಧಾನ ಕಾರ್ಯದರ್ಶಿ ಡಾ. ಜೆಡ್ಡು ಗಣಪತಿ ಭಟ್ ಮಾಹಿತಿ

ವಿಟ್ಲ: ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ ಸ್ಥಾಪನೆಯಾಗಲಿರುವ ದೇವರ ವಿಗ್ರಹ 6 ಅಡಿ ಎತ್ತರವಿದ್ದು, ನೆಲ್ಲಿಕಾರು ಏಕಶಿಲೆಯಿಂದ ನಿರ್ಮಾಣವಾಗಿದೆ. 6ತಿಂಗಳಿಂದ ವಿಗ್ರಹ ನಿರ್ಮಾಣ ಕಾರ್ಯ ವಿವಿಧ ವಿಧಿವಿಧಾನಗಳ ಮೂಲಕ ಕಾರ್ಕಳದಲ್ಲಿ ನಡೆದಿದ್ದು, ಶ್ರೀ ಧನ್ವಂತರಿ ದೇವರ ವಿಗ್ರಹ ಮೆರವಣಿಗೆ ಹಾಗೂ ಜಲಾಧಿವಾಸ ಕಾರ್ಯಕ್ರಮ ಮಾ.11ರಂದು ಅಳಿಕೆ ಪದ್ಮಗಿರಿಯಲ್ಲಿ 11ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಜೆಡ್ಡು ಗಣಪತಿ ಭಟ್ ಹೇಳಿದರು.

ಅವರು ಬುಧವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ ನಡೆಸಲಿದ್ದು, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ. ೪೮ನೇ ದಿನದಲ್ಲಿ ಬ್ರಹ್ಮಕಲಶಾಧಿ ಕಾರ್ಯಕ್ರಮಗಳು ನಡೆಯಲಿದ್ದು, ಯಾವುದೇ ಸಮಸ್ಯೆಗಳು ಬಾರದ ರೀತಿಯಲ್ಲಿ ನಡೆಯುವ ಉದ್ದೇಶದಿಂದ ದೀಕ್ಷಾ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಈ ಸಂದರ್ಭ ನಡೆಯಲಿದೆ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಮಾತನಾಡಿ ಮಾ.೧೧ರಂದು ಬೆಳಗ್ಗೆ ೯ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿಟ್ಲ ಪೇಟೆಯ ಮೂಲಕ ಸರ್ಕಾರಿ ಬಸ್ ನಿಲ್ದಾಣದವರೆಗೆ ದೇವರ ವಿಗ್ರಹದ ಮೆರವಣಿಗೆ ಪಾದಯಾತ್ರೆಯ ಮೂಲಕ ಸಂಚರಿಸಿ, ಅಲ್ಲಿಂದ ಬೈರಿಕಟ್ಟೆ ಅಶ್ವತ್ಥನಾರಾಯಣ ಭಜನಾ ಮಂದಿರದ ಮೂಲಕವಾಗಿ ಕ್ಷೇತ್ರದ ವರೆಗೆ ವಾಹನ ಜಾಥಾ ಮೂಲಕ ಸಾಗಲಿದೆ ಎಂದು ಹೇಳಿದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply