Header Ads
Header Ads
Breaking News

ವಿಟ್ಲದ ಬಾಕಿಮಾರ್ ಗದ್ದೆಯಲ್ಲಿ ಕರಾವಳಿ ಅಮ್ಯೂಸ್‌ಮೆಂಟ್ಸ್ ವಿಟ್ಲ ಉತ್ಸವ

ವಿಟ್ಲದ ಬಾಕಿಮಾರ್ ಗದ್ದೆಯಲ್ಲಿ ಪ್ರಾರಂಭಗೊಂಡಿರುವ ಕರಾವಳಿ ಅಮ್ಯೂಸ್‌ಮೆಂಟ್ಸ್ ವಿಟ್ಲ ಉತ್ಸವ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗುತ್ತಿದೆ. ಉತ್ಸವದಲ್ಲಿ ಮಕ್ಕಳ ಮನರಂಜನೆ ಆಟ, ಬೈಕ್ ಹಾಗೂ ಕಾರ್ ರೇಸ್ ಪ್ರದರ್ಶನ ಎಲ್ಲರ ಮನಸೂರೆಗೊಂಡಿದೆ.

ಜನವರಿ 4ರಿಂದ ಪ್ರಾರಂಭಗೊಂಡ ಮನರಂಜನೆ ಕಾರ್ಯಕ್ರಮ ಜನವರಿ ೩೦ರ ವರೆಗೆ ನಡೆಯಲಿದೆ. ವಿಟ್ಲ ಉತ್ಸವದಲ್ಲಿ ಮಕ್ಕಳ ಮನರಂಜನೆ ಆಟ, ಬೈಕ್ ಹಾಗೂ ಕಾರ್ ರೇಸ್ ಪ್ರದರ್ಶನ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗುತ್ತಿದೆ. ಅದಲ್ಲದೇ ಸ್ವಿಮ್ಮಿಂಗ್ ಫೂಲ್, ವಿವಿಧ ಮನರಂಜನೆ ಆಟಗಳು ಮತ್ತಷ್ಟು ಮೆರುಗು ನೀಡುತ್ತಿದೆ. ಜನವರಿ ೧೪ರಿಂದ ಇತಿಹಾಸ ಪ್ರಸಿದ್ಧ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಈ ಕಾರ್ಯಕ್ರಮ ಹಮ್ಮಿಕೊಂಡಿವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ಅದಲ್ಲದೇ ಪುತ್ತೂರಿನ ಹೆಸರಾಂತ ಪುತ್ತೂರು ಸಮೃದ್ಧಿ ಮ್ಯೂಸಿಕಲ್ ನೈಟ್ ತಂಡದಿಂದ ಚಲನಚಿತ್ರ ರಸಮಂಜರಿ ಮತ್ತಷ್ಟು ಮೆರುಗು ನೀಡುತ್ತಿದೆ. ವಿಶೇಷವಾಗಿ ಈ ಕಾರ್ಯಕ್ರಮ ನಡೆಸಿಕೊಟ್ಟ ಶಿವಾನಂದ ಶೆಣೈ ಪುತ್ತೂರು ಅವರನ್ನು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ ಹಾಗೂ ವಿಟ್ಲ ಉತ್ಸವದ ವ್ಯವಸ್ಥಾಪಕ ಇಸುಬು ಕಾಶಿಮಠ ಅವರಿಂದ ಸನ್ಮಾನಿಸಿದರು.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಆಗಮಿಸುತ್ತಿದ್ದು, ಈ ಬಗ್ಗೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Related posts

Leave a Reply