Header Ads
Breaking News

ವಿಟ್ಲದ ಬೊಳಂತಿಮೊಗರು ಹಿ.ಪ್ರಾ. ಶಾಲಾ ಅಮೃತ ಸಂಭ್ರಮ

ವಿಟ್ಲ: ಬೊಳಂತಿಮೊಗರು ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಿಕ್ಷಕ ರಕ್ಷಕ ಸಮಿತಿ ಸಹಯೋಗದಲ್ಲಿ ಶಾಲಾ ಅಮೃತ ಸಂಭ್ರಮ, ಬಯಲು ರಂಗಮಂದಿರ ಅಮೃತಕಲಶ ಹಾಗೂ ಎರಡು ತರಗತಿ ಕೊಠಡಿಗಳ ಶಾಲಾರ್ಪಣೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಜಂಟಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಎಂಆರ್‍ಪಿಎಲ್ ಸಂಸ್ಥೆಯಿಂದ ಹಲವಾರು ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದೀಗ ಇಲ್ಲಿ ಎಂಆರ್‍ಪಿಎಲ್ ವತಿಯಿಂದ ಶಾಲಾ ಕೊಠಡಿ ನಿರ್ಮಾಣಗೊಂಡಿದೆ ಎಂದರು.

ಎಂ.ಆರ್.ಪಿ.ಎಲ್ ಮುಖ್ಯ ಮಹಾಪ್ರಬಂಧಕ ಯೋಗೀಶ್ ನಾಯಕ್ ಮಾತನಾಡಿ ಎಂಆರ್‍ಪಿಎಲ್ ಸಂಸ್ಥೆ ತನ್ನ ಲಾಭಾಂಶದಲ್ಲಿ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಕನ್ನಡ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಕನ್ನಡ ಶಾಲೆಯಲ್ಲಿ ಕಲಿತವರು ಜೀವನದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ ಎಂದರು.

ಉದ್ಯಮಿ ಸುಬ್ರಾಯ ಪೈ ಹಾಗೂ ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ಹಾಗೂ ಎಂ.ಆರ್.ಪಿ.ಎಲ್ ಮುಖ್ಯ ಮಹಾಪ್ರಬಂಧಕ ಯೋಗೀಶ್ ನಾಯಕ್ ಅವರು ತರಗತಿ ಕೊಠಡಿ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಉದ್ದ ಜಿಗಿತ ಪಿಟ್ ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಗ್ರಂಥಾಲಯ ಉದ್ಘಾಟಿಸಿದರು. ಸದಸ್ಯೆ ಇಂದಿರಾ ಅಡ್ಯಾಳಿ ನೀರಿನ ಕೈ ತೊಳೆಯುವ ಘಟಕ ಉದ್ಘಾಟಿಸಿದರು. ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳನ್ನು ಹಾಗೂ ಸ್ಥಳೀಯರನ್ನು ಸನ್ಮಾನಿಸಲಾಯಿತು.

ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯೆ ಲತಾ ಅಶೋಕ್, ವಿಟ್ಲ ಅಧ್ಯಾಪಕ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಕೆ, ವ್ಯವಸ್ಥಾಪಕ ಕೃಷ್ಣ ಪ್ರಕಾಶ್, ಉಪಾಧ್ಯಕ್ಷ ರಾಜೇಂದ್ರ ರೈ ಅಳಿಕೆ, ನಿವೃತ್ತ ಶಿಕ್ಷಕ ಪಿ.ಡಿ ಶೆಟ್ಟಿ ವನಭೋಜನ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಜೂಲಿಯಾನಾ ಮೇರಿ ಲೋಬೋ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಹನೀಫ್ ಸ ಅದಿ, ಎಂಆರ್ ಪಿಎಲ್ ನ ಶ್ರೀಶಾ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪುರಂದರ ಅಂಚನ್, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು, ಪ್ರೌಢ ಶಾಲಾ ವಿಭಾಗದ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಜಗದೀಶ್ಚಂದ್ರ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾರಾಯಣ ಗೌಡ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸಂಜೀವ ಎಚ್, ವಿಠಲ ನಾಯಕ್, ಪ್ರಭಾರ ಮುಖ್ಯ ಶಿಕ್ಷಕ ಅನಿಲ್ ವಡಗೇರಿ, ಕೇಶವಯ್ಯ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *