Header Ads
Header Ads
Breaking News

ವಿಟ್ಲದ ಮಂಗಳಪದವು-ಅನಂತಾಡಿ ರಸ್ತೆ ಅಭಿವೃದ್ಧಿ :ಮಾಜಿ ಶಾಸಕಿ ಪ್ರಸ್ತಾವನೆ ಮೂಲಕ ಅನುದಾನ ಬಿಡುಗಡೆ

ವಿಟ್ಲ: ವಿಟ್ಲದ ಮಂಗಳಪದವು-ಅನಂತಾಡಿ ರಸ್ತೆ ಅಭಿವೃದ್ಧಿಗೆ ಮಾಜಿ ಶಾಸಕಿಯ ಪ್ರಸ್ತಾವನೆ ಮೂಲಕ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಅದನ್ನು ಬಿಜೆಪಿಯವರು ಕೇಂದ್ರ ಸರ್ಕಾರದ ಅನುದಾನ ಎಂದು ಬಿಂಬಿಸುವ ಮೂಲಕ ಬ್ಯಾನರ್ ರಾಜಕೀಯ ಮಾಡುತ್ತಿದೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ತಿಳಿಸಿದ್ದಾರೆ.

ಅವರು ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಕಸಬಾ ವ್ಯಾಪ್ತಿಯ ಮಂಗಳಪದವು ಅನಂತಾಡಿ ರಸ್ತೆಯ ಎರಡು ಸಂಕಕ್ಕೆ ಈಗಾಗಲೇ ನಬಾರ್ಡ್ ಯೋಜನೆಯಡಿಯಲ್ಲಿ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಂಡು ಶಿಲಾನ್ಯಾಸ ನಡೆಸಲಾಗಿದೆ. ಆದರೆ ಈ ಕಾರ್ಯಕ್ರಮ ಹಾಗೂ ಅನುದಾನ ಬಿಜೆಪಿ ಶಾಸಕರದ್ದು, ಎಂದು ಬಿಂಬಿಸಿ ಮಾಜಿ ಶಾಸಕರನ್ನು ಹಾಗೂ ಮಾಜಿ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂದುರು.

ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 1.75 ಕೋಟಿ ರೂ. ಕಾಮಗಾರಿಗೆ ಟೆಂಡರ್ ಆಗಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಅದೇ ರೀತಿ ಕಳೆದ ವರ್ಷ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬದನಾಜೆ ಪರಿಯಾಲ್ತಡ್ಕ ರಸ್ತೆಗೆ1.25 ಲಕ್ಷ ರೂ. ಡಾಂಬರೀಕರಣಕ್ಕೆ ಶಂಕುಸ್ಥಾಪನೆ ಮಾಡಿದ ಕೂಡಲೇ ಸಂಸದರ ವಿಶೇಷ ಪ್ರಯತ್ನದಿಂದ 10 ಕೋಟಿ ರೂ. ಅನುದಾನ ಇಟ್ಟಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು 14 ಬ್ಯಾನರ್ ಅಳವಡಿಸಿದ್ದರು. ಇದುವರೆಗೂ ಹಣ ಬಂದಿಲ್ಲ. ರಸ್ತೆ ಅಭಿವೃದ್ಧಿಗೊಂಡಿಲ್ಲ. ಬ್ಯಾನರ್‌ನಲ್ಲಿ ಮಾತ್ರ ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಶಾಸಕರ ಪ್ರಯತ್ನದಲ್ಲಿ ಬಿಡುಗಡೆಗೊಂಡ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುರಹಿಮಾನ್ ನೆಲ್ಲಿಗುಡ್ಡೆ, ಅಬೂಬಕ್ಕರ್ ಒಕ್ಕೆತ್ತೂರು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಅಶೋಕ್ ಕುಮಾರ್ ಮಚ್ಚ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *