Header Ads
Breaking News

ವಿಟ್ಲದ ಮಾಣಿಲ ಗ್ರಾ.ಪಂ ಚುನಾವಣೆ : ವಿಷ್ಣುಕುಮಾರ್ ಆಯ್ಕೆ

ಸೋಮವಾರ ನಡೆದ ಮಾಣಿಲ ಗ್ರಾಪಂ ಉಪಚುನಾವಣೆಯ ಮತ ಎಣಿಕೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆದಿದ್ದು, ವಿಷ್ಣುಕುಮಾರ್ ಆಯ್ಕೆಯಾಗಿದ್ದಾರೆ.

ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ರಾಜೇಶ್ ಕುಮಾರ್ ಬಾಳೆಕಲ್ಲು ಎರಡರಲ್ಲೂ ಜಯ ಗಳಿಸಿದ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮಾಣಿಲ, ಪುದುವಿನ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಇವುಗಳ ಪೈಕಿ ಪುದು ಗ್ರಾಪಂನಲ್ಲಿ ವೀಣಾ ಎಂಬವರು ಅವಿರೋಧ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಮಾಣಿಲದಲ್ಲಿ ಮಾತ್ರ ಚುನಾವಣೆ ನಡೆದಿತ್ತು. 1025 ಮಂದಿ ಮತದಾರರಿರುವ ಈ ಸ್ಥಾನದಲ್ಲಿ 637 ಮತ ಚಲಾವಣೆಯಾಗಿದ್ದು, ವಿಷ್ಣುಕುಮಾರ್ 364 ಮತ ಗಳಿಸಿದ್ದಾರೆ. ಸುರಜ್ ರೈ 226 ಮತ ಗಳಿಸಿದರೆ, ಮೊಯ್ದೀನ್ ಅವರು 41 ಮತ ಗಳಿಸಿದರು. 6 ಮತಗಳು ತಿರಸ್ಕøತಗೊಂಡಿವೆ.

Related posts

Leave a Reply

Your email address will not be published. Required fields are marked *