Header Ads
Header Ads
Header Ads
Breaking News

ವಿಟ್ಲದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ವಿವಿಧ ಸಂಘಟನೆಗಳ ಜತೆ ಮಹತ್ವಪೂರ್ಣ ನಿರ್ಧಾರ

ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಭವಿಸುತ್ತಿದ್ದ ಟ್ರಾಫಿಕ್ ಸಮಸ್ಯೆ ಬಗ್ಗೆ ವಿಟ್ಲ ಪಟ್ಟಣ ಪೊಲೀಸ್ ಠಾಣಾಧಿಕಾರಿಗಳ ಸಮ್ಮುಖದಲ್ಲಿ ರಿಕ್ಷಾ, ಕಾರು, ಬಸ್ ಸಂಬಂಧಪಟ್ಟ ವಿವಿಧ ಸಂಘಟನೆಗಳನ್ನು ಕರೆದು ಮಹತ್ವಪೂರ್ಣ ನಿರ್ಧಾರಗಳನ್ನು ಪ್ರಕಟಿಸಲಾಯಿತು.

ವಿಟ್ಲ-ಪುತ್ತೂರು ರಸ್ತೆಯ ಬಲಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು. ವಿಟ್ಲ ಸಾಲೆತ್ತೂರು ರಸ್ತೆಯ ಬೆನಕ ಕ್ಲಿನಿಕ್ ಆಸ್ಪತ್ರೆ ತನಕ ಯಾವುದೇ ವಾಹನ ನಿಲ್ಲಿಸಬಾರದು. ವಿಟ್ಲ ಮಂಗಳೂರು ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿಯ ವರೆಗೆ ಹಾಗೂ ಕಾಸರಗೋಡು ರಸ್ತೆಯ ವಿಜಯಲಕ್ಷ್ಮೀ ಟ್ರೇಡರ್‍ಸ್ ಅಂಗಡಿ ವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂದು ತೀರ್ಮಾನಿಸಲಾಯಿತು.

ಪೇಟೆಯ ಒಳಗಡೆ ಕರ್ಕಶ ಹಾರ್ನ್‌ಗಳನ್ನು ಬಳಸಬಾರದು. ಪುರಭವನದ ರಸ್ತೆಯಲ್ಲಿ ಸಂತೆಯ ದಿನ ಹೊರತುಪಡಿಸಿ ಉಳಿದ ದಿನ ಬಲಭಾಗದಲ್ಲಿ ಪಾರ್ಕಿಂಗ್ ಮಾಡುವುದು. ಈ ಎಲ್ಲಾ ಕಾನೂನುಗಳು ನ.4 ರಿಂದ 10 ದಿನಗಳೊಳಗೆ ಜಾರಿಗೆ ಬರಲಿದೆ. ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಲಾಗಿದೆ. ಇವುಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜುರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಸಂಘಟನೆ ಪ್ರಮುಖರು ಮತ್ತು ವ್ಯಾಪಾರಿಗಳು ಭಾಗವಹಿಸಿ ಅಭಿಪ್ರಾಯಗಳನ್ನು ತಿಳಿಸಿದರು. ಇದೇ ಸಂದರ್ಭ ಅಧ್ಯಕ್ಷ ಅರುಣ್ ಎಂ ವಿಟ್ಲ ಮಾತನಾಡಿ ಈ ಹಿಂದೆ ಜಿಲ್ಲಾಧಿಕಾರಿಗಳು ಪ್ರಕಟಿಸಿದ ನಿಯಮಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಎಲ್ಲ ವಾಹನ ಚಾಲಕ, ಮಾಲಕರು ಸಹಕರಿಸಬೇಕು. ಪೊಲೀಸರಿಗೂ ಸಹಕರಿಸಬೇಕು ಎಂದು ವಿನಂತಿಸಿದರು.

ಠಾಣಾಧಿಕಾರಿ ನಾಗರಾಜ್ ಮಾತನಾಡಿ ಪದೇ ಪದೇ ತಪ್ಪುಗಳನ್ನು ಮಾಡಿದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಮತ್ತೆ ವಿವಿಧ ಒತ್ತಡಗಳ ಮೂಲಕ ನಮಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ, ವಿಟ್ಲ ಎಸೈ ನಾಗರಾಜ್, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

Related posts

Leave a Reply