Header Ads
Header Ads
Header Ads
Breaking News

ವಿಟ್ಲದ ಸುತ್ತಮುತ್ತಲಿನ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ಆಚರಣೆ ಮುಸ್ಲಿಂ ಬಾಂಧವರಿಂದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

 

ವಿಟ್ಲ ಸುತ್ತಮುತ್ತಲಿನ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಹೋದರತೆ, ಸಂತೋಷ, ಸ್ನೇಹದಿಂದ ಅರ್ಪಣ ಭಾವದಿಂದ ಒಟ್ಟಿಗೆ ಸೇರಿ ಹಬ್ಬಗಳನ್ನು ಆಚರಿಸಬೇಕು. ಬಕ್ರೀದ್ ಹಬ್ಬ ಲೋಕದ ಜನತೆಗೆ ಶಾಂತಿ, ಸಹೋದರತೆ ಸಂದೇಶ ನೀಡುತ್ತದೆ. ಈ ಹಬ್ಬದಿಂದ ಪರಸ್ಪರ ಪ್ರೀತಿ ಸಹೋದರತ್ವ, ಶಾಶ್ವತವಾಗಿ ಉಂಟು ಮಾಡುತ್ತದೆ. ಐಕ್ಯತೆಯಿಂದ ಜೀವನ ನಡೆಸಲು ಇದು ದಾರಿ ತೋರಿಸುತ್ತದೆ ಎಂದು ಹೇಳಿದರು.ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ವಿ.ಎಚ್ ಅಶ್ರಫ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕೆಲಿಂಜ ಜುಮಾ ಮಸೀದಿಯಲ್ಲಿ ಖತೀಬು ಎಸ್.ಎಂ ಅಬ್ಬಾಸ್ ದಾರಿಮಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂದೇಶ ನೀಡಿ ತ್ಯಾಗ ಬಲಿದಾನದ ಸಂಕೇತವಾದ ಪವಿತ್ರ ಬಲಿ ಪೆರ್ನಾಲ್ ಜನರಿಗೆ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು. ವಿಟ್ಲದ ಕಂಬಳಬೆಟ್ಟು, ಕನ್ಯಾನ, ಅಳಕೆಮಜಲು, ಕರೋಪಾಡಿ, ಸಾಲೆತ್ತೂರು, ಉಕ್ಕುಡ, ಮೊದಲಾದ ಕಡೆಗಳಲ್ಲಿ ಹಬ್ಬ ಆಚರಿಸಲಾಯಿತು. ಮುಸ್ಲಿಂ ಭಾಂದವರು ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply