Header Ads
Header Ads
Breaking News

ವಿಟ್ಲ:ಮಾಣಿಯಲ್ಲಿ ಕೆಟ್ಟು ನಿಂತ ಲಾರಿ ಸಂಚಾರ ಸ್ಥಗಿತ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿ ಮಾನಸ ಆಯಿಲ್ ಮಿಲ್ ಎದುರು ರಸ್ತೆ ಮಧ್ಯೆಯೇ ಲಾರಿಯೊಂದು ಕೆಟ್ಟು ನಿಂತಿದ್ದು ಇತರ ವಾಹನಗಳು ಸಂಚಾರಕ್ಕೆ ಹರ ಸಾಹಸ ಪಟ್ಟ ಘಟನೆ ನಡೆದಿದೆ. 

ಮುಂಜಾನೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕಬ್ಬಿಣ ಸಾಗಾಟ ಮಾಡುತ್ತಿದ್ದ ಆರು ಚಕ್ರದ ಲಾರಿ ಮಾಣಿಯ ಹಳೀರ ಎಂಬಲ್ಲಿ ರಸ್ತೆ ಮಧ್ಯೆದಲ್ಲಿ ಕೆಟ್ಟು ನಿಂತಿದೆ. ಲಾರಿ ಮುಂದಕ್ಕೆ ಹೋಗಲಾಗದೇ ರಸ್ತೆಯಲ್ಲಿಯೇ ಬಾಕಿಯಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್, ಲಾರಿ, ಶಾಲಾ ವಾಹನಗಳು ರಸ್ತೆಯಲ್ಲಿ ಉಳಿದ ಪರಿಣಾಮ ಉದ್ಯೋಗಿಗಳು, ಹಾಗೂ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ. ಮಾಣಿಯಿಂದ ಸುರಿಕುಮೇರು, ಹಾಗೂ ಬುಡೋಳಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿದ್ದಾರೆ.

Related posts

Leave a Reply