Header Ads
Header Ads
Breaking News

ವಿಟ್ಲ:ವಿಠಲ ಪದವಿ ಪೂರ್ವ ಕಾಲೇಜುನಲ್ಲಿ ಹಿರಿಯ ವಿದ್ಯಾರ್ಥಿಗಳ ಸಕುಟುಂಬ ಸ್ನೇಹ ಮಿಲನ-2019

ವಿಟ್ಲ: ವಿಠಲ ವಿದ್ಯಾ ಸಂಘ ಮತ್ತು ವಿಠಲ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ವಿಠಲ ಸುಪ್ರಜಿತ್ ಐಟಿಐನ ಹಿರಿಯ ವಿದ್ಯಾರ್ಥಿಗಳ ಸಕುಟುಂಬ ಸ್ನೇಹ ಮಿಲನ – 2019 ಕಾರ್ಯಕ್ರಮ ವಿಠಲ ಪದವಿ ಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಜಿಲ್ಲಾ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯ ಮಾತನಾಡಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಶಿಕ್ಷಕರ ವೇತನದ ಬಗ್ಗೆ ಹೋರಾಟ ನಡೆಸುತ್ತೇನೆ. ಶಾಲಾ ದಿನಗಳಲ್ಲಿ ಇಲ್ಲಿ ಅಭೂತಪೂರ್ವ ಸಹಕಾರ ಮಾರ್ಗದರ್ಶನ ಸಿಕ್ಕಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆದ ಸಂಸ್ಥೆಯನ್ನು ಮರೆಯಬಾರದು. ಸಂಸ್ಥೆಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು.ಸುಪ್ರಜಿತ್ ಇಂಜಿನಿಯರಿಂಗ್ ಲಿಮಿಡೆಟ್ ಚಯರ್ ಮ್ಯಾನ್ ಅಜಿತ್ ಕುಮಾರ್ ರೈ ಮಾತನಾಡಿ ಶಾಲೆಗಳಲ್ಲಿ ಸುಸಜ್ಜಿತ ಜಾಗ ಇದ್ದಾಗ ಹೊಸ ವಿದ್ಯಾರ್ಥಿಗಳ ಆಕರ್ಷಿಸಬಹುದು. ಶಾಲೆಯನ್ನು ಮಾದರಿಯಾಗಿ ರೂಪಿಸುವುದು ಹಳೆ ವಿದ್ಯಾರ್ಥಿಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸಾಧ್ಯವಾಗುವ ರೀತಿಯ ಸಹಾಯ ಎಲ್ಲರೂ ಶಾಲೆಗಾಗಿ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಹಾಗೂ ಸಿಬ್ಬಂದಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆಗೈದ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಬೆಂಗಳೂರು ಕೆ ಇ ಬಿ ನಿವೃತ್ತ ಮುಖ್ಯ ಇಂಜಿನಿಯರ್ ಪದ್ಮನಾಭ ಭಟ್, ಕುಂದಾಪುರ ಭಂಡಾರ್ ಕಾರ್‍ಸ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ. ಪಾರ್ವತಿ ಜಿ ಐತಾಳ್, ಮುಂಬಯಿ ಮೆಝ್‌ಗಾನ್ ಡಾಕ್ ಶಿಪ್ ಬಿಲ್ಡರ್‍ಸ್ ನಿವೃತ್ತ ಜನರಲ್ ಮೆನೇಜರ್ ಅಲ್ಫೋನ್ಸ್ ಸಿಲ್ವೆಸ್ಟರ್ ಮಸ್ಕರೇಂಞಸ್, ಪಣಂಬೂರು ಆರಕ್ಷಕ ವೃತ್ತ ನಿರೀಕ್ಷಕ ರಫೀಕ್, . ಸಂಚಾಲಕ ಎಲ್. ಎನ್. ಕೂಡೂರು, ಸಂಚಾಲನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಪ್ರಕಾಶ್ ಕೆ., ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಸುಬ್ರಾಯ ಪೈ, ನಿತ್ಯಾನಂದ ನಾಯಕ್, ಬಾಬು ಕೆ. ವಿ., ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್, ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply