Header Ads
Header Ads
Breaking News

ವಿಟ್ಲ:ಸೆ.27ರಂದು ಹಿಂದೂ ರುದ್ರಭೂಮಿ ಲೋಕಾರ್ಪಣೆ

ದ.ಕ.ಜಿ.ಪಂ., ಬಂಟ್ವಾಳ ತಾ.ಪಂ., ಕೇಪು ಗ್ರಾ.ಪಂ., ಕೇಪು ರುದ್ರಭೂಮಿ ಸೇವಾ ಸಮಿತಿ ಸಾರ್ವಜನಿಕರ ಸಹಕಾರದೊಂದಿಗೆ ಕೇಪು ಗ್ರಾಮದ ಕಲ್ಲಂಗಳದಲ್ಲಿ ನಿರ್ಮಿಸಿರುವ ಹಿಂದೂ ರುದ್ರ ಭೂಮಿ ಲೋಕಾರ್ಪಣೆ ಕಾರ್ಯಕ್ರಮ ಸೆ.27ರಂದು ನಡೆಯಲಿದೆ ಎಂದು ಕೇಪು ಗ್ರಾ.ಪಂ.ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ತಿಳಿಸಿದರು. ಅವರು ಬುಧವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ರುದ್ರಭೂಮಿ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ.ಪಂ.ಸದಸ್ಯೆ ಜಯಶ್ರೀ ಕೋಡಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ತಾ.ಪಂ.ಸದಸ್ಯೆ ಕವಿತಾ ಎಸ್.ನಾಯ್ಕ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರುದ್ರಭೂಮಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಉಪಾಧ್ಯಕ್ಷ ಗೋವಿಂದರಾಯ ಶೆಣೈ, ಉಪಾಧ್ಯಕ್ಷ ಬಾಲಚಂದ್ರ ನಾಯಕ್ ಕಟ್ಟೆ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ದಂಬೆಕಾನ, ಸದಸ್ಯ ಶ್ರೇಯಸ್ ರೈ ಉಪಸ್ಥಿತರಿದ್ದರು.

Related posts

Leave a Reply