Header Ads
Header Ads
Breaking News

ವಿಟ್ಲ:ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗನಗದು ದೋಚಿದ ಘಟನೆ ವಿಟ್ಲದ ಬೊಬ್ಬೆಕೇರಿ ದೇವಸ್ಯ ಬೈಲು ಎಂಬಲ್ಲಿ ನಡೆದಿದೆ.18 ಪವನ್ ಚಿನ್ನಾಭರಣ ಹಾಗೂ 65ಸಾವಿರ ನಗದು ಕಳ್ಳರು ಎಗರಿಸಿದ್ದಾರೆ. ವಿಟ್ಲದ ಪತ್ರಕರ್ತ, ವಿಷ್ಣುಗುಪ್ತ ಪುಣಚ ಯಾನೆ ರಮೇಶ್ ಕೊಡಂದೂರು ಅವರು ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು.

ಅವರ ಪತ್ನಿಯೂ ಕೆಲಸಕ್ಕೆಂದು ತೆರಳಿದ್ದರು. ಸಂಜೆ 4 ಗಂಟೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಹಿಂಬಾಗಿಲು ಮುರಿದು, ಒಳನುಗ್ಗಿದ ಕಳ್ಳರು ಮನೆಯೊಳಗಡೆ ಇದ್ದ ಕಪಾಟಿನಲ್ಲಿದ್ದ ನಗನಗದು ದೋಚಿದ್ದಾರೆ.ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

Related posts

Leave a Reply