Header Ads
Header Ads
Breaking News

ವಿಟ್ಲ ಅನಂತೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ. ವಿಶ್ವ ಹಿಂದೂ ಪರಿಷದ್, ದುರ್ಗಾವಾಹಿನಿ ವಿಟ್ಲದ ಆಶ್ರಯದಲ್ಲಿ ಕಾರ್ಯಕ್ರಮ.

ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ ದುರ್ಗಾವಾಹಿನಿ ವಿಟ್ಲದ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. 24ನೇ ವರ್ಷದ ಆಚರಣೆ ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಅ.24ರಂದು ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ ಎಂದು ಮಾತೃ ಮಂಡಳಿ ಪ್ರಮುಖ್, ಅರ್ಧಮಂಡಲೋತ್ಸವ ಸಮಿತಿ ಅಧ್ಯಕ್ಷ ಮೂಕಾಂಬಿಕಾ ಹೇಳಿದರು.ಅವರು, ವಿಟ್ಲದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮತನಾಡಿ, ಬೆಳಗ್ಗೆ ೯ಕ್ಕೆ ಶ್ರೀವರಮಹಾಲಕ್ಷ್ಮೀ ಪೂಜೆ ಆರಂಭವಾಗಲಿದ್ದು, ಮಾತೆಯರಿಂದ ಸಾಮೂಹಿಕ ಶ್ರೀ ಲಲಿತ ಸಹಸ್ರನಾಮ ಪಠನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ದುರ್ಗಾಪೂಜೆ ಅಂಗವಾಗಿ ದೀಪಪ್ರತಿಷ್ಠೆ, 7.30ಕ್ಕೆ ಅಷ್ಠಾವಧಾನ ಸೇವೆ, ಮಂಹಾಮಂಗಳಾರತಿ, ಪ್ರಸಾದ ವಿತರಣೆ, ಫಲಾಹಾರ ನಡೆಯಲಿದೆ ಎಂದರು.ಅರ್ಧಮಂಡಲೋತ್ಸವ ಸಮಿತಿ ಕಾರ್ಯದರ್ಶಿ, ವಿಶ್ವಹಿಂದೂ ಪರಿಷದ್ ವಿಟ್ಲ ಪ್ರಖಂಡ ಸಹಕಾರ್ಯದರ್ಶಿ ರಶ್ಮಿ ಹರೀಶ್ ವಿಟ್ಲ, ವಿಟ್ಲ ಪ್ರಖಂಡ ದುರ್ಗಾವಾಹಿನಿ ಸಂಚಾಲಕಿ, ಕೋಶಾಧಿಕಾರಿ ರೇವತಿ ರವೀಂದ್ರ ವಿಟ್ಲ ಉಪಸ್ಥಿತರಿದ್ದರು.

Related posts

Leave a Reply