Header Ads
Breaking News

ವಿಟ್ಲ ಅಳಕೆಮಜಲಿನ ಶ್ರೀ ಶಾರದಾಂಬಾ ಭಜನಾ ಮಂಡಳಿಯಲ್ಲಿ ನವರಾತ್ರಿ ಮಹೋತ್ಸವ ಮತ್ತು ಶಾರದೋತ್ಸವ

ವಿಟ್ಲ ಸಮೀಪದ ಅಳಕೆಮಜಲು ಅಶೋಕ ನಗರ ಶ್ರೀ ಶಾರದಾಂಬಾ ಭಜನಾ ಮಂಡಳಿಯಲ್ಲಿ ನಡೆಯಲಿರುವ ನವರಾತ್ರಿ ಮಹೋತ್ಸವ ಮತ್ತು ಶಾರದೋತ್ಸವ ಪ್ರಯುಕ್ತ ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ಸಂಗೀತಗಳ ವಿಶೇಷ ಶೈಲಿಯ ಸಾಂಸ್ಕøತಿಕ ಸೌರಭ ಗ್ರೇಂಡ್ ಡ್ಯಾನ್ಸ್, ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಇದೇ ಅಕ್ಟೋಬರ್ 5ರ ಶನಿವಾರ ಸಂಜೆ ನಡೆಯಲಿದೆ. ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ ತಂಡ ಕರ್ನಾಟಕ ಕೇರಳ ಕರಾವಳಿಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿ ಖ್ಯಾತಿಗಳಿಸಿದ ಜನಪ್ರಿಯ ತಂಡವಾಗಿದೆ. ಪ್ರತಿವರ್ಷದಂತೆ ಈ ವರ್ಷವು ಅದ್ಧೂರಿ ಕಾರ್ಯಕ್ರಮ ನೀಡಲು ಸಿದ್ಧತೆ ನಡೆಸಿದೆ. ಈ ಕಾರ್ಯಕ್ರಮದಲ್ಲಿ ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್, ಕೇರಳದ ಖ್ಯಾತ ಗಾಯಕ ಪೊಲ್ಲಾಚಿ ಮುತ್ತು, ಖ್ಯಾತ ಗಾಯಕಿ ರಶ್ಮಿ ನಾರಾವಿ, ಖ್ಯಾತ ನಿರೂಪಕ ವಿಜೆ ಮಧುರಾಜ್, ಗಾಯಕಿ ವಿಜಯಶ್ರೀ ಮುಳಿಯ, ರಾಕೇಶ್ ದಿಲ್ಸೆ ಅವರು ಭಾಗವಹಿಸಲಿದ್ದಾರೆ ಸಂಘಟಕರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *